ಗರ್ಭಾವಸ್ಥೆಯಲ್ಲಿ ಕಾಡುವಂತಹ ಸಮಸ್ಯೆಗಳ ಬಗ್ಗೆ ಎಚ್ಚರ ಇರಲಿ..!

ಮಹಿಳೆಯರಿಗೆ ತಾಯಿ ಆಗುವುದು ಒಂದು ಮಹತ್ತರ ಅಂಶವಾಗರುತ್ತದೆ. ಪ್ರತಿಯೊಬ್ಬ ಹೆಣ್ಣು ಮಗಳು ಬಯಸುವ ಕನಸು ಕೂಡ. ಗರ್ಭಿಣಿಯಾಗಿರುವಾಗ ಅತಿಹೆಚ್ಚು ಕಾಳಜಿಯಿಂದ ಇರಬೇಕಾಗುತ್ತದೆ. ಇಲ್ಲವಾದರೆ ಅಪಾಯ ಸಂಭವಿಸುವುದು. ದೈಹಿಕವಾಗಿ ಹಾಗೂ ಮಾನಸಿಕವಾಗಿ ಉತ್ತಮ ಆರೋಗ್ಯ ಹೊಂದಿದ್ದರೆ ಮಗುವಿನ ಬೆಳವಣಿಗೆ ಉಂಟಾಗುವುದು.
ಜೊತೆಗೆ ಸುಸೂತ್ರವಾದ ಹೆರಿಗೆಯು ಆಗುತ್ತದೆ.. ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಆರೋಗ್ಯದಲ್ಲಿ ಬದಲಾವಣೆ ಉಂಟಾಗುವುದು ಸಹಜ. ಆದರೆ ಕೆಲವು ಆಯ್ದ ಮಹತ್ತರವಾದ ಆರೋಗ್ಯ ಸಮಸ್ಯೆಯಿಂದ ತಾಯಿ ಮತ್ತು ಮಗು ಜೀವನ ಮರಣದೊಂದಿಗೆ ಹೋರಾಡುವ ಪರಿಸ್ಥಿತಿಯೂ ಉಂಟಾಗುವ ಸಾಧ್ಯತೆಗಳಿವೆ.. ಹಾಗಾಗಿ ಗರ್ಭಿಣಿಯರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಗರ್ಭಾವಸ್ಥೆಯ ಮೊದಲು ಇರುವ ಆರೋಗ್ಯ ಸಮಸ್ಯೆ ಗರ್ಭಾವಸ್ಥೆಗೆ ಪೂರ್ವದಲ್ಲಿ ತಾಯಿಗೆ ಇರುವ ಕೆಲವು ಆರೋಗ್ಯ ಸಮಸ್ಯೆಯು ಮಗುವಿಗೂ ಆಗುವ ಸಾಧ್ಯತೆಗಳಿರುತ್ತವೆ. ಎಚ್‍ಐವಿ ಸೋಂಕು ಹೊಂದಿರುವ ಮಹಿಳೆಯ ಗರ್ಭಾವಸ್ಥೆಯು ಕೂಡ ಅತ್ಯಂತ ಆತಂಕಕಾರಿಯಾಗಿರುತ್ತದೆ. ಇದನ್ನು ಹೊರತು ಪಡಿಸಿದರೆ ಅಧಿಕ ರಕ್ತದೊತ್ತಡ, ಥೈರಾಯ್ಡ್, ಮೂತ್ರಪಿಂಡದ ಸಮಸ್ಯೆ, ಹೃದಯದ ತೊಂದರೆ ಸೇರಿದಂತೆ ಇನ್ನಿತರ ಸಮಸ್ಯೆಯು ಕಾಡುತ್ತವೆ. ಅವಳಿ ಭ್ರೂಣಗಳು ಗರ್ಭಾವಸ್ಥೆಯಲ್ಲಿ ತಾಯಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಭ್ರೂಣವು ಬೆಳೆಯುತ್ತಿದ್ದರೆ ತಾಯಿ ಹೆಚ್ಚು ಕಾಳಜಿಯನ್ನು ವಹಿಸಬೇಕು. ಮಗುವಿನ ಬೆಳವಣಿಗೆ ಆದಂತೆ ಹೆಚ್ಚು ಅಪಾಯಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಗರ್ಭಧಾರಣೆಯ ಕೊನೆಯ ತಿಂಗಳ ಅವಧಿಯಲ್ಲಿ ತಾಯಿ ಅಧಿಕ ವಿಶ್ರಾಂತಿಯನ್ನು ಪಡೆಯಬೇಕು. ಐವಿಎಫ್ ಗರ್ಭಾವಸ್ಥೆಯಲ್ಲಿ ಭ್ರೂಣದ ಅಸಹಜತೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತದೆ. ಇಂತಹ ಗರ್ಭಧಾರಣೆಯಿಂದ ಹುಟ್ಟುವ ಮಕ್ಕಳು ಸಾಮಾನ್ಯವಾಗಿ ಹುಟ್ಟಿನಿಂದಲೆ ಹೃದಯದ ಆರೋಗ್ಯ ಸಮಸ್ಯೆಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಕೃತಕವಾದ ಗರ್ಭಧಾರಣೆಯಾಗಿರುವುದರಿಂದ ಅಧಿಕ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ.ಆದ್ದರಿಂದ ಹೆಚ್ಚು ವಿಶ್ರಾಂತಿಯನ್ನು ಪಡೆಯಬೇಕು.
Comments