ಪದವಿ ಪ್ರವೇಶ ಪ್ರಕ್ರಿಯೆ ಆರಂಭ

ಎರಡು ದಿನಗಳ ಹಿಂದಷ್ಟೆ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದ ಹಿನ್ನೆಲೆಯಲ್ಲೇ ಪದವಿ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ.
ಕೆಲವು ಪ್ರತಿಷ್ಠಿತ ಕಾಲೇಜುಗಳ ಕಾರ್ಮಿಕರ ದಿನವನ್ನು ಪರಿಗಣಿಸದೆ ಮಂಗಳವಾರ ಮಧ್ಯಾಹ್ನದವರೆಗೆ ಅರ್ಜಿ ನೀಡಿವೆ. ಮತ್ತೆ ಕೆಲವು ಕಾಲೇಜುಗಳು ಬುಧವಾರದಿಂದ ಅರ್ಜಿ ನೀಡಲಿವೆ. ಈ ವರ್ಷ ವಾಣಿಜ್ಯ ವಿಭಾಗಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಲಿದೆ ಎಂಬ ನಿರೀಕ್ಷೆಯು ಕೂಡ ಇದೆ. ಬಹುತೇಕ ಪ್ರತಿಷ್ಠಿತ ಕಾಲೇಜುಗಳಲ್ಲಿ ವಾಣಿಜ್ಯಕ್ಕೆ ಶೇ.80 ಮತ್ತು ವಿಜ್ಞಾನ ಮತ್ತು ಕೆಲೆಗೆ ಶೇ.60ರಷ್ಟು ಕಟ್‌ಆಫ್ ನಿಗದಿಮಾಡಿಕೊಂಡಿವೆ ಈ ವರ್ಷ ದ್ವಿತೀಯ ಪಿಯುಸಿ ಫಲಿತಾಂಶ ಕೂಡ ಶೇ.7.18 ಹೆಚ್ಚಳವಾಗಿರುವುದರಿಂದ ಪ್ರವೇಶಕ್ಕೆ ನಿಗದಿಪಡಿಸುವ ಕಟ್‌ಆಫ್ ಅಂಕವನ್ನು ಶೇ.2 ರಷ್ಟು ಏರಿಕೆ ಮಾಡಿದೆ. ಮೇ.5ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲು ನಿರ್ಧರಿಸಿಕೊಂಡಿವೆ.
Comments