ಸಿಮ್ ಪಡೆಯಲು ಆಧಾರ್ ಕಡ್ಡಾಯವಲ್ಲ: ಕೇಂದ್ರ ಸರ್ಕಾರದ ಸೂಚನೆ

ಆಧಾರ್ ಕಾರ್ಡ್ ಅನ್ನೊದು ಎಷ್ಟರ ಮಟ್ಟಿಗೆ ಇದೆ ಅಂದರೆ ಎಲ್ಲ ಕಡೆಗಳಲ್ಲೂ ಅದನ್ನು ಗುರುತಿನ ಚೀಟಿಯ ರೂಪದಲ್ಲಿ ಬಳಸುತ್ತಿದ್ದಾರೆ. ಮೊಬೈಲ್ ಸಿಮ್ ಪಡೆಯಲು ಆಧಾರ್ ಕಡ್ಡಾಯವಲ್ಲ. ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತು ಚೀಟಿ , ಪಾಸ್ ಪೋರ್ಟ್ ಮತ್ತಿತರ ಬೇರೆ ಯಾವುದೆ ದಾಖಲೆಗಳನ್ನು ನೀಡಿದರೂ ಕೂಡ ಸಿಮ್ ನೀಡಬಹುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಗ್ರಾಹಕರಿಗೆ ತೊಂದರೆ ಆಗದಂತೆ ಮೊಬೈಲ್ ಕಂಪನಿಗಳು ಸರ್ಕಾರದ ಸೂಚನೆಗಳನ್ನು ಪಾಲಿಸಬೇಕು ಎಂದು ಟೆಲಿಕಾಂ ಕಾರ್ಯದರ್ಶಿ ಸುಂದರರಾಜನ್ ಸ್ಪಷ್ಟಪಡಿಸಿದ್ದಾರೆ. ಆಧಾರ್ ಗೆ ಸಂಬಂಧಿಸಿ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳುವ ತನಕ ಸಿಮ್ ಪಡೆಯಲು ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಈಗಾಗಲೇ ನಿರ್ದೇಶನ ನೀಡಿದ್ದರೂ, ಮೊಬೈಲ್ ಕಂಪನಿಗಳು ಆಧಾರ್ ನೀಡದವರಿಗೆ ಸಿಮ್ ನಿರಾಕರಿಸುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ ಇದೀಗ ಆದೇಶವನ್ನು ನೀಡಿದೆ.ಇನ್ನು ಮುಂದೆ ಆಧಾರ್ ಇಲ್ಲದೆಯೂ ಸಿಮ್ ಕಾರ್ಡ್ ಗಳನ್ನು ಪಡೆಯಬಹುದು.
Comments