ಕಾಸ್ಟಿಂಗ್ ಕೌಚ್ ಬಗ್ಗೆ ನಟ ಚೇತನ್ ಹೇಳಿದ್ದೇನು ಗೊತ್ತಾ?
ಇತ್ತಿಚಿಗೆ ಕಾಸ್ಟಿಂಗ್ ಕೌಚ್ ಎನ್ನುವ ಪದ ಹೆಚ್ಚಾಗಿ ಕೇಳಿ ಬರುತ್ತಿದೆ. ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ ಎಲ್ಲಾ ಭಾಷೆಗಳಲ್ಲೂ ಕೂಡ ಕಾಸ್ಟಿಂಗ್ ಕೌಚ್ ಸಮಸ್ಯೆ ಇದೆ ಎಂದು ಸಾಕಷ್ಟು ಸುದ್ದಿಯಾಗುತ್ತಿದೆ. ಶ್ರೀರೆಡ್ಡಿ ನಂತರ ಸಾಕಷ್ಟು ಸಿನಿಮಾ ಮಂದಿ ಈ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿದ್ದರು.ಈದೀಗ ನಟ ಚೇತನ್ ಕೂಡ ಇದರ ಬಗ್ಗೆ ಮಾತನಾಡುತ್ತಿದ್ದಾರೆ.
ಚಿತ್ರರಂಗದ ಮೊದಲಿನಿಂದಲೂ ಕೂಡ ಕಾಸ್ಟಿಂಗ್ ಕೌಚ್ ಇದೆ. ಇದನ್ನು ಹೋಗಲಾಡಿಸಲು ಸಾಮೂಹಿಕ ಜವಾಬ್ದಾರಿ ಅಗತ್ಯವಿದೆ ಎಂದು ನಟ ಚೇತನ್ ಹೇಳಿದ್ದಾರೆ. ದಾವಣಗೆರೆಯಲ್ಲಿ ಜಿಲ್ಲಾ ವರದಿಗಾರರ ಕೂಟ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ನಟ ಚೇತನ್ ಹಿರಿಯ ಕಲಾವಿದರು ಇಂತಹ ಬೆಳವಣಿಗೆಗಳ ಬಗ್ಗೆ ಮೌನ ಮುರಿಯಬೇಕಿದೆ ಎಂದು ಹೇಳಿದ್ದಾರೆ.ಕಾಸ್ಟಿಂಗ್ ಕೌಚ್ ವಿರುದ್ಧ ಹೋರಾಟ ನಡೆಸಲು ಸಮಾನ ಮನಸ್ಕರೆಲ್ಲಾ ಸೇರಿ 'ಫೈರ್' ಎಂಬ ಸಂಘಟನೆಯನ್ನು ಆರಂಭಿಸಿದ್ದೇವೆ. ಅನೇಕ ಕಲಾವಿದರು ದೂರು ನೀಡಿದ್ದು, ಕಾನೂನು ಹೋರಾಟ ನಡೆಸಲಾಗುವುದು ಎಂಬ ಮಾಹಿತಿಯನ್ನು ನೀಡಿದ್ದಾರೆ. ಕಾಸ್ಟಿಂಗ್ ಕೌಚ್ ಅನ್ನು ತೊಲಗಿಸಲು ಎಲ್ಲರೂ ಮೌನ ಮುರಿಯಬೇಕು ಎಂದಿದ್ದಾರೆ.
Comments