ಕೇಂದ್ರ ಸರ್ಕಾರದಿಂದ ಗ್ರಾಹಕರು, ವರ್ತಕರಿಗೆ ಗುಡ್ ನ್ಯೂಸ್..!

ಮೇ 4 ರಂದು ಜಿ.ಎಸ್.ಟಿ. ಮಂಡಳಿಯ ಸಭೆ ನಡೆಯಲಿದ್ದು, ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡಲು ಇನ್ನಷ್ಟು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಡಿಜಿಟಲ್ ವಹಿವಾಟು ಉತ್ತೇಜಿಸುವ ಪ್ರಸ್ತಾವಗಳನ್ನು ಪ್ರಧಾನಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈಗಾಗಲೇ ಚರ್ಚಿಸಲಾಗಿದ್ದು, ಗ್ರಾಹಕರು, ವರ್ತಕರಿಗೆ ಭಾರೀ ಆಫರ್ ಒಂದನ್ನು ನೀಡಲಾಗುವುದು.ಡಿಜಿಟಲ್ ವಹಿವಾಟು ನಡೆಸುವ ಗ್ರಾಹಕರಿಗೆ ಸರಕಿನ ಮಾರಾಟ ಬೆಲೆಯಲ್ಲಿ 100 ರೂ.ವರೆಗೂ ರಿಯಾಯಿತಿ ನೀಡಲಾಗುತ್ತದೆ. ವರ್ತಕರಿಗೆ ಒಟ್ಟು ವ್ಯವಹಾರದ ಮೊತ್ತ ಆಧರಿಸಿ ಕ್ಯಾಶ್ ಬ್ಯಾಕ್ ಆಫರ್ ಕೂಡ ನೀಡಲಾಗುವುದು ಎಂದಿದ್ದಾರೆ. ಕಂದಾಯ ಇಲಾಖೆ ಡಿಜಿಟಲ್ ವ್ಯವಹಾರ ಉತ್ತೇಜನಕ್ಕೆ ಪ್ರಸ್ತಾವನೆ ಸಿದ್ಧಪಡಿಸಿದ್ದು, ಗ್ರಾಹಕರು ಖರೀದಿಸುವ ಸರಕುಗಳಿಗೆ ನಗದು ರಹಿತವಾಗಿ ಹಣ ಪಾವತಿಸಿದೇ ಆದರೆ ಎಂ.ಆರ್.ಪಿ. ಯಲ್ಲಿ 100 ರೂ.ವರೆಗೂ ರಿಯಾಯಿತಿ ಪಡೆಯಬಹುದು.ಗ್ರಾಹಕ ಖರೀದಿಸುವ ಸರಕಿನ ಮೇಲೆ ರಿಯಾಯಿತಿ ನೀಡುವ, ವರ್ತಕರಿಗೆ ಕ್ಯಾಶ್ ಬ್ಯಾಕ್ ಸೌಲಭ್ಯ ಒದಗಿಸುವ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಪರಿಶೀಲಿಸಿದ್ದು, ಮೇ 4 ರಂದು ನಡೆಯುವ ಜಿ.ಎಸ್.ಟಿ. ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
Comments