ದ್ವಿತೀಯ ಪಿಯು ಫಲಿತಾಂಶಕ್ಕೆ ಕೌಂಟ್ ಡೌನ್ ಶುರು!

ದ್ವಿತೀಯ ಪಿಯು ಪರೀಕ್ಷೆಗಳ ಫಲಿತಾಂಶ ಇಂದು (ಏ.30) ರಂದು ಪ್ರಕಟವಾಗಲಿದೆ. ಮಾರ್ಚ್ ತಿಂಗಳಿನಲ್ಲಿ ನಡೆದದ್ವಿತೀಯ ಪಿಯು ಫಲಿತಾಂಶವನ್ನು www.pue.kar.nic.in ವೆಬ್‌ಸೈಟ್‌ನಲ್ಲಿ ನೋಂದಣಿ ಸಂಖ್ಯೆಯನ್ನು ಬಳಸಿ ನೋಡಬಹುದು. 2017-18ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಗಳು ಮಾರ್ಚ್ 1ರಿಂದ 17ರವರೆಗೆ ನಡೆದಿತ್ತು. ಸುಮಾರು 6.90 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.. ಅದರಲ್ಲಿ 3,53,000 ವಿದ್ಯಾರ್ಥಿಗಳು ಮತ್ತು 3,34,000 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು.
ಸೋಮವಾರ ಮಧ್ಯಾಹ್ನ ಒಂದು ಗಂಟೆಗೆ ಫಲಿತಾಂಶವನ್ನು ವೆಬ್‌ಸೈಟ್‌ಗಳಲ್ಲಿ ನೋಡಬಹುದು. ಮೇ 1ರಂದು ಆಯಾ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟವಾಗುತ್ತದೆ. ಫಲಿತಾಂಶವನ್ನು kar.nic.in , karresults.nic.inಮತ್ತು pue.kar.nic.in ವೆಬ್‌ಸೈಟ್‌ಗಳ ಮೂಲಕ ಫಲಿತಾಂಶವನ್ನು ಪಡೆದುಕೊಳ್ಳಬಹುದು.
ಫಲಿತಾಂಶ ನೋಡುವ ವೆಬ್‌ಸೈಟ್ ಈ ಕೆಳಕಂಡಂತಿದೆ.
1) http://karresults.nic.in ವೆಬ್‌ಸೈಟ್‌ಗೆ ಓಪನ್ ಮಾಡಿ
2) ನೋಂದಣಿ ಸಂಖ್ಯೆ ಮತ್ತು ಇತರ ಅಗತ್ಯ ಮಾಹಿತಿ ನೀಡಬೇಕು
3) Submit ಬಟನ್ ಕ್ಲಿಕ್ ಮಾಡಿ.
4) ಫಲಿತಾಂಶದ ಮಾಹಿತಿಯನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟೌಟ್ ತೆಗೆದುಕೊಳ್ಳಬಹುದು.
ಎಸ್‌ಎಂಎಸ್ ಮೂಲಕ ಫಲಿತಾಂಶ, ನಿಮ್ಮ ಮೊಬೈಲ್‌ನಲ್ಲಿ KAR12 ಎಂದು ಟೈಪ್ ಮಾಡಿ, ಸ್ಪೇಸ್ ಕೊಟ್ಟು ನಿಮ್ಮ ನೋಂದಣಿ ಸಂಖ್ಯೆಯನ್ನು ಟೈಪ್ ಮಾಡಿ. 56263ಗೆ ಎಸ್‌ಎಂಎಸ್ ಮಾಡಿ. ಫಲಿತಾಂಶವನ್ನು ಎಸ್‌ಎಂಎಸ್ ಮೂಲಕ ಫಲಿತಾಂಶವನ್ನು ಪಡೆದುಕೊಳ್ಳಬಹುದು.ಎಲ್ಲಾ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್.
Comments