ಮೋದಿ ಸರ್ಕಾರದಿಂದ ಹೊಸ ಯೋಜನೆ…!
ಪ್ರಧಾನಿ ಮೋದಿ ಸರ್ಕಾರ ಹೊಸದಾದ ಯೋಜನೆಯನ್ನು ಆರಂಭ ಮಾಡಲು ರೆಡಿಯಾಗಿದೆ. ಶೀಘ್ರ ರಥಯಾತ್ರೆಯನ್ನು ಕೈಗೊಳ್ಳಲಿರುವ ಕೇಂದ್ರ ಸರ್ಕಾರ ಸ್ಥಳದಲ್ಲಿ ಯುವ ಜನತೆಗೆ ಉದ್ಯೋಗವನ್ನು ಕಲ್ಪಿಸಿ ಯುವಜನತೆಯ ಸಬಲೀಕರಣದ ಉದ್ದೇಶದಿಂದ ಇಂತಹ ರಥಯಾತ್ರೆ ಕೈಗೊಳ್ಳಲಾಗುತ್ತಿದೆ. ಈ ರಥಯಾತ್ರೆಗೆ ಕೌಶಲ್ಯ ಅಭಿವೃದ್ಧಿ ಸಚಿವರು ಚಾಲನೆಯನ್ನು ನೀಡಲಿದ್ದಾರೆ.
ಬಿಜೆಪಿ ಆಡಳಿತದಲ್ಲಿ ಇರುವ ರಾಜ್ಯಗಳಲ್ಲಿ ಕೌಶಲ ರಥ ಯಾತ್ರೆ ನಡೆಸಲು ಅಲ್ಲಿನ ಮುಖ್ಯಮಂತ್ರಿಗಳೂ ಕೂಡ ಅನುಮೋದನೆಯನ್ನು ನೀಡಿದ್ದು, ಶೀಘ್ರ ರಾಜಸ್ಥಾನ, ಮಧ್ಯ ಪ್ರದೇಶ, ಚತ್ತೀಸ್'ಗಢದಲ್ಲಿ ಈ ರಥಯಾತ್ರೆಯು ಸಾಗಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಯಲ್ಲಿ ಹಿಂದುಳಿದಿದೆ ಎಂದು ವಿಪಕ್ಷಗಳು ವಾಗ್ದಾಳಿ ನಡೆಸಿರುವ ನಿಟ್ಟಿನಲ್ಲಿ ಉದ್ಯೋಗ ಸೃಷ್ಟಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ. ಈ ಯೋಜನೆಯಿಂದಾಗಿ ಯುವಜನತೆಗೆ ಉದ್ಯೋಗ ಕಲ್ಪಿಸುವಂತೆ ಆದರೆ ಸಾಕು.
Comments