ಶಾಲೆಗೆ ಹೋಗಲ್ಲ ಎಂದ ಮಗಳಿಗೆ ಅಪ್ಪ ಹೀಗಾ ಮಾಡೋದು?
ಎಲ್ಲರೂ ಕೂಡ ಚಿಕ್ಕ ಮಕ್ಕಳಲ್ಲಿ ಶಾಲೆಗೆ ಹೋಗೋಕೆ ತುಂಬಾನೆ ಹಠ ಮಾಡುತ್ತೇವೆ. ಶಾಲೆಗೆ ಹೋಗಲ್ಲ ಅಂತ ಅಳುತ್ತಾ ಕುಳಿತುಬಿಡುತ್ತೇವೆ. ಆಗ ತಂದೆ ತಾಯಿ ಏನೋ ಮುದ್ದಿಸಿ ತಿಂಡಿ ಕೊಟ್ಟು ಶಾಲೆಗೆ ಕಳುಹಿಸುತ್ತ್ತಾರೆ.
ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ನಾನಾ ಕಸರತ್ತು ಮಾಡ್ತಾರೆ. ಅಂತೆಯೇ ಕೆಲ ಮಕ್ಕಳು ದೊಡ್ಡವರಾದ ಮೇಲೆಯೂ ಶಾಲೆ ಅಂದರೆ ದೂರ ಓಡಿ ಹೋಗ್ತಾರೆ. ಇದೆ ರೀತಿಯ ಘಟನೆ ಚೀನಾದಲ್ಲಿ ನಡೆದಿದೆ. ಏಪ್ರಿಲ್ 23ರಂದು ದಕ್ಷಿಣ ಚೀನಾದ ಯುನ್ಫು ಎಂಬಲ್ಲಿ ತಂದೆಯೊಬ್ಬ ತನ್ನ ಮಗಳು ಶಾಲೆಗೆ ಹೋಗಿಲ್ಲ ಅಂತಾ ಕೋಪದಿಂದ ಆಕೆಯನ್ನು ಬೈಕಿನ ಹಿಂಬದಿಯ ಸೀಟಿಗೆ ಹಗ್ಗದಿಂದ ಕಟ್ಟಿ ಕರೆದುಕೊಂಡು ಹೋಗಿದ್ದಾನೆ. ಜನನಿಬಿಡ ರಸ್ತೆಯಲ್ಲಿ ಮಗಳನ್ನು ಬೈಕಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ದೃಶ್ಯವನ್ನು ಜನರು ಮೊಬೈಲ್‍ಗಳಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ ಯಾವ ಯಾವ ರೀತಿಯ ಪೋಷಕರು ಇರ್ತಾರಪ್ಪ..?
Comments