3ನೇ ದಿನವೂ ಮುಂದುವರೆದ ದಿಲ್ಲಿಯ ಏಮ್ಸ್ ರೆಸಿಡೆಂಟ್ ವೈದ್ಯರ ಮುಷ್ಕರ
ಸಿಬ್ಬಂದಿಗಳು ಮತ್ತು ರೋಗಿಗಳ ಮುಂದೆಯೇ ತಮ್ಮ ಸಹೋದ್ಯೋಗಿಗೆ ಕಪಾಳ ಮೋಕ್ಷ ಮಾಡಿದ್ದ ಹಿರಿಯ ವೈದ್ಯರೋರ್ವರನ್ನು ಕೆಲಸದಿಂದ ವಜಾ ಮಾಡುವಂತೆ ಆಗ್ರಹಿಸಿ ಇಲ್ಲಿನ ಏಮ್ಸ್ ಆಸ್ಪತ್ರೆಯ ರೆಸಿಡೆಂಟ್ ವೈದ್ಯರು ನಡೆಸುತ್ತಿರುವ ಮುಷ್ಕರ ಇಂದು 3ನೇ ದಿನಕ್ಕೆ ತಲುಪಿದೆ.
ಪರಿಣಾವಾಗಿ ದಿನನಿತ್ಯ ನಡೆಯಬೇಕಿರುವ ಶಸ್ತ್ರ ಚಿಕಿತ್ಸೆಗಳು ಕೂಡ ನಡೆಯುತ್ತಿಲ್ಲ. ಹೊರ ರೋಗಿಗಳ ವಿಭಾಗ ತೀವ್ರವಾಗಿ ಹದಗೆಟ್ಟಿದೆ, ಒಪಿಡಿ ಗೆಂದು ಬಂದ ರೋಗಿಗಳು ಮನೆಗೆ ವಾಪಸಾಗುತ್ತಿದ್ದಾರೆ ಎಂದು ವರದಿಯಾಗಿದೆ.ಕೇವಲ ಎಮರ್ಜೆನ್ಸಿ ಮತ್ತು ಐಸಿಯು ಸೇವೆಗಳು ಮಾತ್ರವೇ ಕೆಲಸ ಮಾಡುತ್ತಿವೆ ಎಂದು ವರದಿಗಳು ತಿಳಿಸಿವೆ. ಆದರೂ ವೈದ್ಯರ ಮುಷ್ಕರದಿಂದ ರೋಗಿಗಳು ಪರದಾಡುವಂತೆ ಆಗಿದೆ.
Comments