ಸರ್ಕಾರಿ ನೌಕರರಿಗೆ ಬಿಗ್ ಶಾಕ್ - 20 ಸಾವಿರ ನೌಕರರು ಅತಂತ್ರ

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಧಿಕಾರಿ ಅಥವಾ ನೌಕರರ ಹಿಂಬಡ್ತಿ-ಮುಂಬಡ್ತಿ ಆದೇಶ ಜಾರಿಗೆ ರಾಜ್ಯ ಸರ್ಕಾರ ನೀಡಿದ್ದ ಚುನಾವಣಾ ನೀತಿ ಸಂಹಿತೆ ನೆಪವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಮೇ.1 ರಿಂದಲೇ ಆದೇಶ ಪಾಲನೆಯಾಗಬೇಕು ಎಂದು ಮಾಹಿತಿಯನ್ನು ನೀಡಿದೆ.
ರಾಜ್ಯ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ರಾಜ್ಯದಲ್ಲಿ ಜಾರಿಯಲ್ಲಿರುವ ಚುನಾವಣಾ ನೀತಿ ಸಂಹಿತೆ ನ್ಯಾಯಾಲಯದ ಈ ಆದೇಶಕ್ಕೆ ಅನ್ವಯಿಸುವುದಿಲ್ಲ. ಯಾವ ಯಾವ ಇಲಾಖೆಗಳಲ್ಲಿ ಹಿಂಬಡ್ತಿ-ಮುಂಬಡ್ತಿ ಆದೇಶ ಹೊರಡಿಸಿಲ್ಲವೊ ಅಲ್ಲೆಲ್ಲ ಮೇ. 1 ರಿಂದ ಈ ಆದೇಶವನ್ನು ಪಾಲನೆ ಮಾಡಬೇಕು ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ. ಸುಪ್ರೀಂಕೋರ್ಟ್ ಆದೇಶವು ಯಥಾವತ್ತಾಗಿ ಪಾಲನೆಯಾದರೆ ಅಂದಾಜು 15 ರಿಂದ 20 ಸಾವಿರ ಸರ್ಕಾರಿ ಅಧಿಕಾರಿ ಮತ್ತು ನೌಕರರಿಗೆ ಹಿಂಬಡ್ತಿ ಮುಂಬಡ್ತಿ ಆಗಲಿದೆ. ಮೀಸಲಾತಿ ಅನ್ವಯ ಬಡ್ತಿ ಪಡೆದಿದ್ದ ಎಸ್ಸಿ-ಎಸ್ಟಿ ನೌಕರರು ಹಿಂಬಡ್ತಿ ಹೊಂದಲಿದ್ದಾರೆ. ಆಯಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಜ್ಯೇಷ್ಠತಾ ಪಟ್ಟಿ ಪ್ರಕಾರ ಮುಂಬಡ್ತಿ ಪಡೆಯಲಿದ್ದಾರೆ. ಈವರೆಗೆ ಉನ್ನತ ಸ್ಥಾನದಲ್ಲಿದ್ದವರು ಕೆಳಗಿನ ಸ್ಥಾನಕ್ಕೆ ಬಂದರೆ ಕೆಳ ಹುದ್ದೆಯಲ್ಲಿದ್ದವರು ಮೇಲಿನ ಹುದ್ದೆ ಹೋಗಲಿದ್ದಾರೆ.
Comments