ಮಹಿಳಾ ಉದ್ಯೋಗಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಕಾರ್ನ್ ಫೆರ್ರಿ ವರದಿ

ಹೆಣ್ಣು ಅಬಲೆಯಲ್ಲ ಸಬಲೆ.. ಆಕೆ ಎಲ್ಲ ಕ್ಷೇತ್ರದಲ್ಲಿಯೂ ತನ್ನ ಛಾಪನ್ನು ಮೂಡಿಸಿದ್ದಾಳೆ. ಪುರುಷರಿಗಿಂತ ನಾವೇನು ಕಡಿಮೆ ಇಲ್ಲ ಎಂದು ಈಗಾಗಲೇ ತೋರಿಸಿಕೊಟ್ಟಿದ್ದಾಳೆ.ಪುರುಷರಿಗೆ ಹೋಲಿಸಿದಾಗ ಮಹಿಳೆಯರಿಗೆ ಕಡಿಮೆ ಸಂಬಳ ನೀಡಲಾಗುತ್ತಿದೆ ಎಂದು ಕಾರ್ನ್ ಫೆರ್ರಿ ಸಂಸ್ಥೆ ವರದಿಯನ್ನು ಮಾಡಿದೆ.
ಮಹಿಳೆಯರು ಕೂಡ ಪುರುಷರಿಗೆ ಸಮನಾಗಿ ಕೆಲಸ ಮಾಡುತ್ತಾರೆ. ಆದರೆ, ಸಂಬಳದ ವಿಷಯದಲ್ಲಿ ತಾರತಮ್ಯ ಮಾಡಲಾಗುತ್ತದೆ. ಭಾರತ ಸೇರಿದಂತೆ ವಿಶ್ವದಲ್ಲಿ ಮಹಿಳೆಯರಿಗೆ ಸರಾಸರಿ ಶೇ. 16.1 ರಷ್ಟು ಕಡಿಮೆ ವೇತನ ನೀಡಲಾಗುತ್ತಿದೆ ಎಂದು ಕಾರ್ನ್ ಫೆರ್ರಿ ವರದಿಯಲ್ಲಿ ತಿಳಿಸಲಾಗಿದೆ. ದೇಶದಲ್ಲಿ ಒಂದೇ ಬಗೆಯ ಕೆಲಸವನ್ನು ನಿರ್ವಹಿಸುವ ಸ್ಥಳದಲ್ಲಿ ಶೇ. 4 ರಷ್ಟು ವೇತನದ ಅಂತರ ಇದೆ. ಒಂದೇ ಸಂಸ್ಥೆ, ಒಂದೇ ರೀತಿಯ ಹುದ್ದೆಯಲ್ಲಿರುವ ಸ್ತ್ರೀ, ಪುರುಷರ ವೇತನ ಅಂತರ ಶೇ. 0.4 ರಷ್ಟಿದೆ. ಗರಿಷ್ಠ ವೇತನ ಪಡೆಯುವ ಮಹಿಳೆಯರ ಸಂಖ್ಯೆ ಕೂಡ ಕಡಿಮೆ ಇದೆ. ಪುರುಷರಿಗೆ ಹೋಲಿಸಿದಾಗ ಮಹಿಳೆಯರಿಗೆ ಕಡಿಮೆ ವೇತನವನ್ನು ನೀಡಲಾಗುತ್ತದೆ ಎಂದು 53 ದೇಶಗಳ 14,000 ಸಂಸ್ಥೆಗಳ 1.23 ಕೋಟಿ ಸಿಬ್ಬಂದಿಯ ವೇತನದ ಮಾಹಿತಿಗಳನ್ನು ವಿಶ್ಲೇಷಿಸಿ ಕಾರ್ನ್ ಫೆರ್ರಿ ಸಂಸ್ಥೆಯಿಂದ ವರದಿಯನ್ನು ಸಿದ್ದ ಪಡಿಸಿದೆ. ಮಹಿಳೆಯು ಎಲ್ಲಾ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರೂ ಕೂಡ ವೇತನ ವಿಷಯದಲ್ಲಿ ಮಾತ್ರ ಆಕೆಯನ್ನು ಹಿಂದಿಟ್ಟಿರುವುದು ಬೇಸರದದ ವಿಷಯ.
Comments