2017ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟ- ಅನುದೀಪ್‌ಗೆ ಮೊದಲ ಸ್ಥಾನ

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ 2017ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ. ತೆಲಂಗಾಣದ ಅನುದೀಪ್ ದುರಿಶೆಟ್ಟಿ ದೇಶಕ್ಕೆ ಮೊದಲ ಸ್ಥಾನವನ್ನು ಪಡೆದಿದ್ದಾರೆ.
ಭಾರತೀಯ ಕಂದಾಯ ಸೇವೆಯ ಅಧಿಕಾರಿಯಾಗಿರುವ ಅನುದೀಪ್, ಸದ್ಯ ಹೈದರಾಬಾದ್‌ನಲ್ಲಿ ಸಹಾಯಕ ಆಯುಕ್ತರಾಗಿದ್ದಾರೆ. ಬಿ.ಇ(ಎಲೆಕ್ಟ್ರಾನಿಕ್ಸ್ ಮತ್ತು ಇನ್‌ಸ್ಟ್ರುಮೆಂಟೇಷನ್) ಪದವಿ ಪಡೆದಿರುವ ಅನುದೀಪ್, ತೆಲಂಗಾಣದ ಮೆಟ್ಟಲ್ಲಿಯವರಾಗಿದ್ದಾರೆ. ಕರ್ನಾಟಕದಿಂದ ಆಯ್ಕೆ ಆಗಿರುವವರ ಪೈಕಿ ಬೀದರ್‌ನ ರಾಹುಲ್ ಶಿಂಧೆ 95ನೇ ರ‍್ಯಾಂಕ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಈ ಬಾರಿ ಕರ್ನಾಟಕದ 27 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಅನುಕುಮಾರಿ ಮತ್ತು ಸಚಿನ್ ಗುಪ್ತಾ ಅವರು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ.
Comments