ಶೂನ್ಯ ಫಲಿತಾಂಶ ಹಿನ್ನಲೆ-10 ಪಿಯು ಕಾಲೇಜುಗಳ ಮಾನ್ಯತೆ ರದ್ದು!
ಮೂರು ವರ್ಷಗಳಿಂದ ಸತತ ಶೂನ್ಯ ಫಲಿತಾಂಶ ಪಡೆದಿರುವ 10 ಅನುದಾನರಹಿತ ಪಿಯು ಕಾಲೇಜುಗಳ ಮಾನ್ಯತೆಯನ್ನು ಪದವಿಪೂರ್ವ ಶಿಕ್ಷಣ ಇಲಾಖೆಯು ರದ್ದುಗೊಳಿಸಿದೆ. ಕಲಬುರಗಿ-4,ದಾವಣಗೆರೆ-2, ಬಳ್ಳಾರಿ 1 ಹಾಗೂ ಬೆಳಗಾವಿ, ಹಾವೇರಿ, ಬಾಗಲಕೋಟೆ ಜಿಲ್ಲೆಯಲ್ಲಿ ತಲಾ ಒಂದು ಕಾಲೇಜಿನ ಮಾನ್ಯತೆಯನ್ನು ಹಿಂಪಡೆಯಲಾಗಿದೆ ಅಲ್ಲದೆ, ಕಾರಣ ಕೇಳಿ ನೋಟಿಸ್ ಕೂಡ ಜಾರಿ ಮಾಡಲಾಗಿದೆ.
2018-19 ನೇ ಸಾಲಿನಿಂದಲೇ ಮಾನ್ಯತೆಯನ್ನು ಹಿಂಪಡೆಯಲಾಗಿದ್ದು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಹತ್ತಿರದ ಕಾಲೇಜುಗಳಿಗೆ ದಾಖಲಾತಿ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಪನಿರ್ದೇಶಕರಿಗೆ ಸೂಚನೆಯನ್ನು ಈಗಾಗಲೇ ನೀಡಲಾಗಿದೆ. ನಿಗಧಿತ ಅವಧಿಗೆ ಮುನ್ನ 2018-19 ನೇ ಸಾಲಿನ ಪಿಯು ಕಾಲೇಜುಗಳ ಪ್ರಾರಂಭವನ್ನು ವಿರೋಧಿಸಿ ಸರ್ಕಾರಿ ಪಿಯು ಕಾಲೇಜುಗಳ ಉಪನ್ಯಾಸಕರ ಸಂಘ ಏ.30ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲು ನಿರ್ಧಾರವನ್ನು ಮಾಡಿದ್ದಾರೆ.
Comments