ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್

ಚಿನ್ನ ಎಂದರೆ ಸಾಕು ಎಲ್ಲರಿಗೂ ಕೂಡ ಸಿಕ್ಕಾಪಟ್ಟೆ ಇಷ್ಟ.ಅದರಲ್ಲೂ ಹೆಣ್ಣು ಮಕ್ಕಳನ್ನೂ ಕೇಳೋಕೆ ಆಗುತ್ತಾ… ಚಿನ್ನದ ಬೆಲೆ ಗಗನಕ್ಕೇರಿದರೂ ಕೂಡ ಶಾಪಿಂಗ್ ಮಾಡೋರ ಸಂಖ್ಯೆ ಅಂತೂ ಕಡಿಮೆ ಆಗಲ್ಲ. ಆದರೆ ಇದೀಗ ಚಿನ್ನ ಖರೀದಿ ಮಾಡುವವರಿಗೆ ಸಿಕ್ಕಿದೆ ಗುಡ್ ನ್ಯೂಸ್.
ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲಿದ್ದ ಚಿನ್ನದ ಬೆಲೆ ಇಳಿಕೆಯಾಗಿದೆ. ಮುಂಬೈ ಚಿನಿವಾರ ಪೇಟೆಯಲ್ಲಿ ಶುಕ್ರವಾರ ಚಿನ್ನದ ಬೆಲೆಯಲ್ಲಿ 115 ರೂ. ಕಡಿಮೆಯಾಗಿದೆ ಎಂದು ತಿಳಿಸಲಾಗಿದೆ. ಪ್ರತಿ 10 ಗ್ರಾಂ ಸ್ಟಾಂಡರ್ಡ್ ಚಿನ್ನದ ಬೆಲೆ 115 ರೂ. ಕಡಿಮೆಯಾಗಿ 31,180 ರೂ.ಗೆ ಮಾರಾಟವಾಗಿದೆ. ಶುದ್ಧ ಚಿನ್ನದ ಬೆಲೆ 31,330 ರೂ. ಗೆ ತಲುಪಿದೆ. ಶುದ್ಧ ಬೆಳ್ಳಿ ಕೆ.ಜಿ.ಗೆ 39,270 ರೂ. ಆಗಿದೆ. ಚಿನ್ನಾಭರಣ ವರ್ತಕರು ಮತ್ತು ಖರೀದಿದಾರರಿಂದ ಬೇಡಿಕೆ ಕಡಿಮೆಯಾದ ಕಾರಣ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ತಿಳಿಸಲಾಗಿದೆ.
Comments