ನಾಳೆಯಿಂದ ಮೆಟ್ರೋ ಸಂಚಾರ ರದ್ದು- ಬೇಡಿಕೆಗಳಿಗೋಸ್ಕರ ಮುಷ್ಕರ
ಮೆಟ್ರೋ ನೌಕರರು ಹಮ್ಮಿಕೊಂಡಿದ್ದ ಮುಷ್ಕರ ಮತ್ತೊಮ್ಮೆ ತಿರುವು ಪಡೆದುಕೊಂಡಿದೆ. ಸಂಘದ ಮಾನ್ಯತೆ, ಬಡ್ತಿ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಪೂರಕವಾದ ಬೆಂಬಲ ದೊರಕಿಲ್ಲ. ಈ ಮೂಲಕ ಹೈಕೊರ್ಟ್ ಆದೇಶ ಪಾಲಿಸಿಲ್ಲ ಎಂದು ಆರೋಪಿಸಿ ಬಿಎಂಆರ್‌ಸಿ ನೌಕರರ ಸಂಘವು ಮತ್ತೆ ಮುಷ್ಕರಕ್ಕೆ ಮಾಡಲು ಮುಂದಾಗಿದೆ.
ನೌಕರರ ಸಮಸ್ಯೆಗಳನ್ನು ಪರಸ್ಪರ ಕುಳಿತು ಬಗೆಹರಿಸಿಕೊಳ್ಳುವಂತೆ ಹೈಕೋರ್ಟ್ ಈ ಹಿಂದೆ ಸೂಚಿಸಿತ್ತು. ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ನಿಗಮದ ಆಡಳಿತ ಮಂಡಳಿಯು ಮತ್ತು ಸಿಬ್ಬಂದಿಯು ವಾರದಲ್ಲಿ ಎರಡು ಬಾರಿ ಸಭೆ ನಡೆಸಿ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಿ, 30 ದಿನಗಳ ಸಮಯವನ್ನು ಕೂಡ ವಿಧಿಸಿತ್ತು. ಆದರೆ, ಇದುವರೆಗೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ನಾಳೆಯಿಂದ ಅನಿರ್ಧಿಷ್ಟವಾದಿ ತನಕ ಮುಷ್ಕರ ಮಾಡಲು ಮುಂದಾಗಿದ್ದಾರೆ ಎಂದು ತಿಳಿಸಲಾಗಿದೆ. ಈ ಹಿಂದೆ ಹೈಕೋರ್ಟ್‌ನ ಆದೇಶವನ್ನು ಪಾಲಿಸದೆ, ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ)ದ ಆಡಳಿತ ಮಂಡಳಿಯು ನ್ಯಾಯಾಂಗ ನಿಂದನೆಯನ್ನು ಮಾಡಿದ್ದು ಈ ಸಂಬಂಧ ಕೋರ್ಟ್‌ಗೆ ದೂರು ಸಲ್ಲಿಸಲಾಗುವುದು. ಜೊತೆಗೆ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದು, ದಿನಾಂಕ ಶೀಘ್ರ ಅಂತಿಮಗೊಳಿಸಲಾಗುವುದು ಎಚ್ಚರಿಕೆ ನೀಡಿತ್ತು, ಆದರೂ ಕೂಡ ಬೆಂಗಳೂರು ಮೆಟ್ರೋ ರೈಲು ನಿಗಮ ನೌಕರರಿಗೆ ಬೆಲೆ ಕೊಡದ ಹಿನ್ನಲೆಯಲ್ಲಿ ಈ ರೀತಿ ನಡೆದಕೊಂಡಿದೆ ಎಂದು .
Comments