ಈ ದಂಪತಿಗಳನ್ನ ನೋಡಿ ಕಲಿಯೋದು ತುಂಬಾ ಇದೆ..!

ಸಿಯಾಚಿನ್... ಹೆಸರು ಕೇಳಿದ್ರೆ ಭಯವಾಗುತ್ತೆ.. ಸದಾ ಮೈನಸ್ ಡಿಗ್ರಿಯಲ್ಲೇ ಇರುವ ಇಲ್ಲಿನ ತಾಪಮಾನದಲ್ಲಿ ಕರ್ತವ್ಯ ನಿರ್ವಹಿಸುವ ನಮ್ಮ ಸೈನಿಕರಿಗೆ ಎಷ್ಟು ಬಾರಿ ತಲೆತಗ್ಗಿಸಿದರೂ ಕೂಡ ಕಡಿಮೆಯೇ.
ಈ ರೀತಿಯ ಗೌರವ ಕೊಡುವುದು ಸುಮ್ಮನಾಗುವುದು ಸಾಮಾನ್ಯರ ವಿಷಯ. ಆದರೆ ಸಾಮಾನ್ಯರಲ್ಲಿ ಅಸಾಮಾನ್ಯರು ತಲೆಬಾಗಿ ಸುಮ್ಮನಾಗುವುದಿಲ್ಲ. ನಮ್ಮನ್ನು ಕಾಯುತ್ತಿರುವ ಸೈನಿಕರ ಋಣವನ್ನು ತೀರಿಸಲು ಮುಂದಾಗುತ್ತಾರೆ. ಮಹಾರಾಷ್ಟ್ರದ ಪುಣೆಯ ದಂಪತಿ ಅಂಥ ಕೆಲಸಕ್ಕೆ ಮುಂದಾಗಿದ್ದಾರೆ. ಇಳಿ ವಯಸ್ಸಿನಲ್ಲಿ ತಮ್ಮ ಬಳಿ ಇರುವ ಬೆಲೆಬಾಳುವ ಆಭರಣಗಳನ್ನೆಲ್ಲ ಮಾರಿ ಅದರಿಂದ ಬಂದ ಹಣದಲ್ಲಿ ಹಿಮಾಲಯ ಶ್ರೇಣಿಯಲ್ಲಿರುವ ಸಿಯಾಚಿನ್ ನಲ್ಲಿ ಒಂದು ಆಕ್ಸಿಜನ್ ಜನರೇಶನ್ ಪ್ಲಾಂಟ್ ನಿರ್ಮಿಸಲು ಮುಂದಾಗಿದ್ದಾರೆ. ಈ ರೀತಿಯಾಗಿ ಎಲ್ಲರೂ ಕೂಡ ಯೋಚನೆ ಮಾಡಿದರೆ ಸೈನಿಕರಿಗೆ ನಾವು ಗೌರವ ಸಲ್ಲಿಸಿದಂತಾಗುತ್ತದೆ.
Comments