ಬ್ಯಾಂಕುಗಳಿಗೆ ಸರಣಿ ರಜೆ- ಗ್ರಾಹಕರೇ ಎಚ್ಚರ

ದೇಶದೆಲ್ಲೆಡೆ ಬ್ಯಾಂಕ್ ಸಿಬ್ಬಂದಿಗಳಿಗೆ 4 ದಿನಗಳ ಸರಣಿ ರಜೆ ಸಿಗಲಿದೆ. ನಾಳೆಯಿಂದ ಮೇ 2ರ ತನಕ ಸಿಗಲಿದೆ. ಗ್ರಾಹಕರು ಇವತ್ತೆ ಬ್ಯಾಂಕ್ ವ್ಯವಹಾರಗಳನ್ನು ಮುಗಿಸಿಕೊಂಡರೆ ಒಳ್ಳೆಯದು ಅನಿಸುತ್ತದೆ. ಕೊನೆಗೆ ಎಟಿಎಂನಲ್ಲೂ ಹಣ ಸಿಗಲಿಲ್ಲ ಎಂದು ದೂರುವುದಾದರೂ ತಪ್ಪುತ್ತದೆ.
ಚೆಕ್ ಕ್ಲಿಯರೆನ್ಸ್, ನಗದು ಜಮೆಗೆ ತೊಂದರೆಯಾಗಬಹುದು. ಎ.ಟಿ.ಎಂ.ಗಳಲ್ಲಿಯೂ ಹಣದ ಕೊರತೆ ಉಂಟಾಗುವ ಸಾಧ್ಯತೆಯನ್ನು ಕೂಡ ಇರಬಹುದು. ಸಾಲು ಸಾಲು ರಜೆಯ ಜೊತೆಗೆ ಬ್ಯಾಂಕ್ ಸಿಬ್ಬಂದಿ ರಜೆ ಹಾಕಿದ್ದರೆ, ಪರಿಸ್ಥಿತಿ ಕಷ್ಟವಾಗುತ್ತದೆ. ಏಪ್ರಿಲ್ 28 : ನಾಲ್ಕನೇ ಶನಿವಾರ (ಬ್ಯಾಂಕ್ ವಹಿವಾಟು ಇರುವುದಿಲ್ಲ), ಏಪ್ರಿಲ್ 29 : ಭಾನುವಾರ ಏಪ್ರಿಲ್ 30: ಸೋಮವಾರ (ಬುದ್ಧ ಪೂರ್ಣಿಮಾ), ಮೇ 1 : ಕಾರ್ಮಿಕರ ದಿನಾಚರಣೆ ..ಮೇಲೆ ತಿಳಸಿದ ರಜೆ ದಿನಗಳನ್ನು ಗಮನದಲ್ಲಿಟ್ಟುಕೊಂಡು ವ್ಯವಹಾರ ನಡೆಸುವುದು ಉತ್ತಮ
Comments