ಮತದಾನದ ಜಾಗೃತಿ ಮೂಡಿಸಲು ಹಾಪ್‌ಕಾಮ್ಸ್ ನಿಂದ ರಿಯಾಯಿತಿ ಮಾರಾಟ

ರಾಜ್ಯ ವಿಧಾನ ಸಭಾ ಚುನಾವಣಾ ದಿನಾಂಕ ಸಮೀಪಿಸುತ್ತಿದ್ದಂತೆ ವಿಧಾನಸಭಾ ಚುನಾವಣೆಗೆ ಮತದಾನದ ಪ್ರಮಾಣವನ್ನು ಹೆಚ್ಚಿಸಲು ರಿಯಾಯಿತಿ ದರದಲ್ಲಿ ಹಣ್ಣು, ತರಕಾರಿ ಮಾರಾಟ ಮೇಳವನ್ನು ಆಯೋಜಿಸಿ ಜಾಗೃತಿ ಮೂಡಿಸಲು ಹಾಪ್‌ಕಾಮ್ಸ್ ಇದೀಗ ಮುಂದಾಗಿದೆ. .
ಮೇ ಮೊದಲ ವಾರ ಮೇಳವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದ್ದು, ಶೇ.5ರ ರಿಯಾಯಿತಿಯಲ್ಲಿ ಮಾರಾಟ ನಡೆಸುವುದರ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆದು ಮತದಾನದ ಮಹತ್ವ ತಿಳಿಸಲು ಹಾಪ್ ಕಾಮ್ಸ್ ಈಗಾಗಲೇ ತೀರ್ಮಾನಿಸಿದೆಯಂತೆ.ಮತದಾನ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅದಕ್ಕಾಗಿ ಅದರ ಮಹತ್ವವನ್ನು ತಿಳಿಸಿ ಮೇ 12ರಂದು ಮತದಾನ ಪ್ರಮಾಣವನ್ನು ಹೆಚ್ಚಿಸಬೇಕೆಂಬುಸು ನಮ್ಮ ಉದ್ದೇಶ ಎಂದು ಹಾಪ್‌ಕಾಮ್ಸ್ ಎಂಡಿ ಆದಂತಹ ವಿಶ್ವನಾಥ್ ತಿಳಿಸಿದ್ದಾರೆ. ಹಾಪ್‌ಕಾಮ್ಸ್ ನ 224 ಮಳಿಗೆಗಳಲ್ಲಿಯೂ ರಿಯಾಯಿತಿ ದರದ ಮಾರಾಟ ನಡೆಯುವ ಸಾಧ್ಯತೆಯಿದ್ದು, ಖರೀದಿಗೆ ಆಗಮಿಸುವ ಗ್ರಾಹಕರಿಗೆ ಮತದಾನದ ಮಹತ್ವ ತಿಳಿಸುವ ಸಂದೇಶವನ್ನು ತಿಳಿಸಲಾಗುತ್ತದೆ ಎಂದಿದ್ದಾರೆ.
Comments