Report Abuse
Are you sure you want to report this news ? Please tell us why ?
ಬೆಳ್ಳಂಬೆಳಿಗ್ಗೆ ಎ.ಸಿ.ಬಿ. ಅಧಿಕಾರಿಗಳಿಂದ ಭ್ರಷ್ಟರಿಗೆ ಶಾಕ್

27 Apr 2018 9:33 AM | General
517
Report
ಎ.ಸಿ.ಬಿ ಅಧಿಕಾರಿಗಳು ರಾಜ್ಯದ ಹಲವೆಡೆ ಇಂದು ಬೆಳ್ಳಂಬೆಳಿಗ್ಗೆ ದಾಳಿಯನ್ನು ನಡೆಸಿದ್ದು, ಭ್ರಷ್ಟರಿಗೆ ಬಿಸಿಯನ್ನು ಮುಟ್ಟಿಸಿದ್ದಾರೆ.
ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣದ ಮುತ್ಯಾಲಪೇಟೆಯಲ್ಲಿ ಶ್ರೀನಿವಾಸಪುರ ತಾಲ್ಲೂಕು ಕಚೇರಿ ಪ್ರಥಮ ದರ್ಜೆ ಸಹಾಯಕ ಮುನಿವೆಂಕಟಪ್ಪ ಅವರ ನಿವಾಸದ ಮೇಲೆ ಏಕಾಏಕಿ ದಾಳಿ ಮಾಡಿ, ದಾಖಲೆಗಳ ಪರಿಶೀಲನೆಯನ್ನು ನಡೆಸಲಾಗಿದೆ. ಆದಾಯ ಮೀರಿ ಅಕ್ರಮವಾಗಿ ಆಸ್ತಿ ಗಳಿಕೆ ಮಾಡಿದ ದೂರಿನ ಹಿನ್ನಲೆಯಲ್ಲಿ ದಾಳಿಯನ್ನು ನಡೆಸಲಾಗಿದೆ ಎಂದು ತಿಳಿಸಲಾಗಿದೆ. ಎ.ಸಿ.ಬಿ. ಡಿ.ವೈ.ಎಸ್.ಪಿ. ಮೋಹನ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆಯನ್ನು ನಡೆಸಲಾಗಿದೆ.

Edited By
Manjula M

Comments