ಮಹದಾಯಿ ವಿವಾದ - ರೈತರಿಂದ ದೆಹಲಿ ಚಲೋ ಹೋರಾಟ
ಮಹದಾಯಿ ವಿವಾದವನ್ನು ಬಗೆ ಹರಿಸುವಂತೆ ಒತ್ತಾಯಿಸಿ ಮಹಾದಾಯಿ ರೈತ ಹೋರಾಟಗಾರರು ದೆಹಲಿ ಚಲೋ ಹೋರಾಟವನ್ನು ಕೈಗೊಂಡಿದ್ದಾರೆ.
ಮಹದಾಯಿ, ಕಳಸಾ-ಬಂಡೂರಿ ವಿವಾದ ಬಗೆಹರಿಸಬೇಕು. ಇಲ್ಲವೇ ದಯಾಮರಣ ನೀಡಿ ಎಂದು ರೈತಸೇನಾ ಅಧ್ಯಕ್ಷ ವೀರೇಶ್ ಸೊಬರದಮಠ ನೇತೃತ್ವದಲ್ಲಿ ಹುಬ್ಬಳ್ಳಿಯಿಂದ ದೆಹಲಿ ಚಲೋವನ್ನು ಹಮ್ಮಿಕೊಳ್ಳಲಾಗಿದೆ. ನಿನ್ನೆ ಹುಬ್ಬಳಿಯಿಂದ ನೂರಾರು ರೈತರು ದೆಹಲಿಯತ್ತ ರೈಲಿನಲ್ಲಿ ಪ್ರಯಾಣವನ್ನು ಕೂಡ ಈಗಾಗಲೇ ಬೆಳೆಸಿದ್ದಾರೆ. ಪಾರ್ಲಿಮೆಂಟ್ ಮುಂದೆ ಪ್ರತಿಭಟನೆ ಬಳಿಕ ದಯಾಮರಣ ನೀಡುವಂತೆ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಲಿದ್ದಾರೆ. ರಾಷ್ಟ್ರಪತಿಗಳು ಸ್ಪಂದಿಸದಿದ್ದರೆ ಅಮರಣ ಉಪವಾಸ ಸತ್ಯಾಗ್ರಹ ಮಾಡಲು ತೀರ್ಮಾನಿಸಿದ್ದಾರೆ.ಈ ಮಹದಾಯಿ ವಿವಾದ ಚುನಾವಣಾ ಪ್ರಚಾರದ ನಡುವೆ ಎಲ್ಲಿಗೆ ತಲುಪಲಿದೆ ಅನ್ನೊದನ್ನ ಕಾದು ನೋಡಬೇಕಿದೆ.
Comments