ಪಿಎಫ್ ಖಾತೆಗೆ ಹಣ ಜಮೆ ಆಗ್ತಿಲ್ವಾ? ಹಾಗದ್ರೆ ಇದನ್ನೊಮ್ಮೆ ಓದಿ
ಉದ್ಯೋಗದಲ್ಲಿರುವವರು ಸರಿಯಾದ ಸಮಯಕ್ಕೆ ಸರಿಯಾಗಿ ಹಣ ಕಟ್ಟದಿದ್ದಲ್ಲಿ ನೌಕರರಿಗೆ ಅದರ ಸಂಪೂರ್ಣಮಾಹಿತಿ ನೀಡುವುದಾಗಿ ಪಿಂಚಣಿ ನಿಧಿ ನಿರ್ವಹಿಸುವ ಇಪಿಎಫ್‌ಒ ಸಂಸ್ಥೆ ತಿಳಿಸಿದೆ.
ಪ್ರಸ್ತುತದಲ್ಲಿರುವ ಖಾತೆದಾರರ ಹಣ ಜಮಾವಣೆಯಾದ ಬಳಿಕ, ಖಾತೆದಾರರಿಗೆ ಎಸ್‌ಎಂಎಸ್/ಇ-ಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ. ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಮಾಸಿಕ ಹಣ ಜಮಾವಣೆಯಾಗದ ಖಾತೆದಾರರಿಗೂ ಮಾಹಿತಿಯನ್ನು ಕೂಡ ನೀಡಲಾಗುತ್ತದೆ ಎಂದು ನೌಕರರ ಪಿಂಚಣಿ ನಿಧಿ ಸಂಸ್ಥೆ (ಇಪಿಎಫ್‌ಒ)ಈಗಾಗಲೇ ತಿಳಿಸಿದೆ. ಇ-ಪಾಸ್‌ಬುಕ್ ಆನ್‌ಲೈನ್ ಮತ್ತು ಉಮಂಗ್ ಮೊಬೈಲ್ ಆಯಪ್ ಮತ್ತು ಮಿಸ್‌ಕಾಲ್ ನೀಡುವ ಮೂಲಕವೂ ಎಲ್ಲ ಸದಸ್ಯರು ಹಣ ಜಮೆ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
Comments