'India first pm' ಎಂದು ಗೂಗಲ್‌ನಲ್ಲಿ ಹುಡುಕಿದ ರಮ್ಯಾಗೆ ಕಾಣಿಸಿದ್ದು ಏನ್ ಗೊತ್ತಾ?

ಕಾಂಗ್ರೆಸ್ ಐಟಿ ಸೆಲ್‍ನ ಮುಖ್ಯಸ್ಥೆ ರಮ್ಯಾ ಭಾರತದ ಮೊದಲ ಪ್ರಧಾನ ಮಂತ್ರಿಯ ಹೆಸರಿಗಾಗಿ ಗೂಗಲ್‍ನಲ್ಲಿ ಹುಡುಕಾಟವನ್ನು ನಡೆಸಿದಾಗ ಅಲ್ಲಿ ಕಾಣಿಸಿರುವುದೇ ಬೇರೆಯಂತೆ.. ಇದನ್ನ ಕಂಡ ರಮ್ಯ ಏನ್ ಮಾಡಿದ್ದಾರೆ ಗೊತ್ತಾ?
ಜವಾಹರಲಾಲ್ ನೆಹರೂ ಹೆಸರಿನೊಂದಿಗೆ ಪ್ರಧಾನಿ ನರೇಂದ್ರ ಮೋದಿ ಫೋಟೋವು ಕಂಡು ಬಂದಿದೆ. ಈ ಕುರಿತು ರಮ್ಯ ಗೂಗಲ್ ಅನ್ನು ಪ್ರಶ್ನಿಸಿ ಟ್ವಿಟರ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಐಟಿ ಸೆಲ್‍ನ ಮುಖ್ಯಸ್ಥೆ ರಮ್ಯಾ ಗೂಗಲ್ ಸರ್ಚ್ ಇಂಜಿನ್‌ನಲ್ಲಿ 'India first pm' ಎಂದು ಟೈಪ್ ಮಾಡಿದಾಗ ಅವರಿಗೆ ನೆಹರೂ ಹೆಸರಿನೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವು ಕಾಣಿಸಿಕೊಂಡಿದೆ. ಈ ಫೋಟೋವನ್ನು ಗೂಗಲ್ ಮತ್ತು ಗೂಗಲ್ ಇಂಡಿಯಾ ಜತೆ ಕೂಡ ಟ್ಯಾಗ್ ಮಾಡಿ, ನಿಮ್ಮ ಸಂಗ್ರಹದಲ್ಲಿ ಬರೀ ಕಸ ತುಂಬಿದೆ. ಈ ಕೂಡಲೇ ಇದನ್ನು ಸರಿಪಡಿಸಿ ಎಂದಿದ್ದಾರೆ.
Comments