ಕನ್ನಡದ ಮತ್ತೊಬ್ಬ ನಟಿಗೂ ಎದುರಾಗಿತಂತೆ ಕಾಸ್ಟಿಂಗ್ ಕೌಚ್ ಸಮಸ್ಯೆ- ಯಾರು ಆ ನಟಿ?

ಶ್ರೀ ರೆಡ್ಡಿ ಕಾಸ್ಟಿಂಗ್ ಕೌಚ್ ವಿವಾದದ ನಂತರ ಕಾಸ್ಟಿಂಗ್ ಕೌಚ್ ಅನುಭವ ನನಗೂ ಆಗಿತ್ತು, ಇದೇ ಕಾರಣಕ್ಕೆ ನಾನು ಬಾಲಿವುಡ್ ನ ದೊಡ್ಡ ದೊಡ್ಡ ಚಿತ್ರಗಳನ್ನು ಕೈ ಬಿಟ್ಟಿದ್ದೆ ಎಂದು ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಛ ಹೇಳಿದ್ದಾರೆ.
ತಮ್ಮ ಅಭಿನಯದ ಚಿಟ್ಟೆ ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಟಿ ಹರ್ಷಿಕಾ, ಬಾಲಿವುಡ್ ನಲ್ಲಿ ನಾನು ಎರಡು ದೊಡ್ಡ ಸಿನೆಮಾವನ್ನು ಮಾಡಬೇಕಿತ್ತು. ಆದರೆ ಕಾಸ್ಟಿಂಗ್ ಕೌಚ್ ಗಾಗಿ ಬೇಡಿಕೆ ಇಟ್ಟಾಗ ಅದನ್ನು ತೊರೆದಿದ್ದೆ ಎಂದು ಹೇಳಿಕೊಂಡಿದ್ಧಾರೆ. ಕನ್ನಡ,ಮಲಯಾಳಂ,ತೆಲುಗು ಚಿತ್ರರಂಗದಲ್ಲಿ ಇಂತಹ ಅನುಭವವಾಗಿರಲಿಲ್ಲ, ಆದರೆ ಬಾಲಿವುಡ್ ಪ್ರವೇಶಕ್ಕೆ ಅವಕಾಶ ಸಿಕ್ಕಾಗ ಇಂತಹ ಕೆಟ್ಟ ಅನುಭವಾಗಿತ್ತು. ಕಾಸ್ಟಿಂಗ್ ಕೌಚ್ ನಿಂದಾಗಿ ಎರಡು ಪ್ರಮುಖ ಬಾಲಿವುಡ್ ಚಿತ್ರಗಳನ್ನು ಕೈ ಬಿಟ್ಟಿದ್ಧೇನೆ ಎಂದು ತಿಳಿಸಿದರು. ಯಾರಾದರೂ ಈ ಬಗ್ಗೆ ಕೇಳಿದಾಗ ವಯಸ್ಸಿನ ಅಂತರದಿಂದಾಗಿ ಆ ಚಿತ್ರ ಕೈಬಿಟ್ಟಿದ್ದಾಗಿ ಹೇಳುತ್ತಿದ್ದೆ. ಈ ಬಗ್ಗೆ ಯಾರಾದರು ಪ್ರಶ್ನೆ ಕೇಳಿದಾಗ ಮುಜುಗರಕ್ಕೊಳಗಾಗುತ್ತಿದೆ ಎಂದು ಹರ್ಷಿಕಾ ಅವರು ಹೇಳಿದ್ದಾರೆ. ಇದೇ ವಿಚಾರಕ್ಕಾಗಿ ತಮ್ಮ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಗ ಪ್ರತಿಕ್ರಿಯೆ ನೀಡಿರುವ ಹರ್ಷಿಕಾ ಯಾರಾದರೂ ನಿಮಗೆ ಇಷ್ಟವಿಲ್ಲದ್ದನ್ನು ಕೇಳಿದರೆ, ಇಲ್ಲ ಎಂದು ಹೇಳಿ. ರೆಬೆಲ್ ಆಗಿ ಜೀವನ ಸಾಗಿಸಿ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
Comments