ಆಧಾರ್ ಗೆ ಪ್ಯಾನ್ ಕಾರ್ಡ್ ಜೋಡಣೆ ಸಮಯ ವಿಸ್ತರಣೆ
ಆಧಾರ್ ಗೆ ಪ್ಯಾನ್ ಕಾರ್ಡ್ ನಂಬರ್ ಜೋಡಣೆಯ ಸಮಯವನ್ನು ಜೂನ್ 30 ರವರೆಗೆ ಸಿಬಿಡಿಟಿ ವಿಸ್ತರಣೆಯನ್ನು ಮಾಡಿದೆ.
ಬರುವ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದ್ದ ಆಧಾರ್ ಗೆ ಪ್ಯಾನ್ ಸಂಖ್ಯೆ ಜೋಡಣೆಯ ಸಮಯವನ್ನು ತೆರಿಗೆ ಇಲಾಖೆಯ ಸಂಸ್ಥೆಯಾಗಿರುವ ನೇರ ತೆರಿಗೆಯ ಕೇಂದ್ರ ಮಂಡಳಿ (ಸಿಬಿಡಿಟಿ) ವಿಸ್ತರಿಸಲು ನಿರ್ಧಾರವನ್ನು ಕೈಗೊಂಡಿದೆ. ಮಾರ್ಚ್ 3 ರ ಒಳಗೆ ಸರ್ಕಾರದ ಅನೇಕ ಜನಕಲ್ಯಾಣ ಯೋಜನೆಗಳಿಗಾಗಿ ಆಧಾರ್ ಲಿಂಕ್ ಕಡ್ಡಾಯ ಮಾಡಿರುವ ಸಮಯವನ್ನು ಸುಪ್ರೀಂಕೋರ್ಟ್ ವಿಸ್ತರಣೆ ಮಾಡಿರುವ ಹಿನ್ನೆಲೆಯಲ್ಲಿ ಸಿಬಿಡಿಟಿ ಈ ನಿರ್ಧಾರವನ್ನು ಕೈಗೊಂಡಿದೆ.
Comments