ಚೀನಾದಲ್ಲಿ ಪತ್ತೆಯಾಯ್ತು ಬಿಗ್ ಮಸ್ಕಿಟೋ
ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ದೇಶದ ಕೀಟಶಾಸ್ತ್ರಜ್ಞರು ಸೇರಿ 11.15 ಸೆಂ. ಮೀ ಉದ್ದದ ರೆಕ್ಕೆಗಳಿರುವ ದೈತ್ಯಗಾತ್ರದ ಸೊಳ್ಳೆಯೊಂದನ್ನು ಕಂಡು ಹಿಡಿದಿದ್ದಾರೆ.
ಜಗತ್ತಿನ ಅತ್ಯಂತ ದೊಡ್ಡ ಸೊಳ್ಳೆ ಜಾತಿಯಾದ ಹೊಲೊರುಸಿಯಾ ಮಿಕಾಡೋ ಗೆ ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಕಂಡು ಹಿಡಿಯಲಾದ ಈ ಸೊಳ್ಳೆ ಸೇರಿದೆ ಎಂದು ಪಶ್ಚಿಮ ಚೀನಾದ ಕೀಟಗಳ ಮ್ಯೂಸಿಯಂನ ಕ್ಯುರೇಟರ್ ಝಾವೊ ಲೀ ತಿಳಿಸಿದ್ದಾರೆ. ಮೊಟ್ಟ ಮೊದಲ ಬಾರಿಗೆ ಜಪಾನ್ ದೇಶದಲ್ಲಿ ಈ ಜಾತಿಯ ಸೊಳ್ಳೆಯನ್ನು ಪತ್ತೆ ಹಚ್ಚಲಾಗಿತ್ತು. ಆಗ ಬ್ರಿಟಿಷ್ ಕೀಟಶಾಸ್ತ್ರಜ್ಞ ಜಾನ್ ಒಬದಿಯ ವೆಸ್ಟ್ ವುಡ್ 1876ರಲ್ಲಿ ಅದಕ್ಕೆ ಆ ಹೆಸರು ನೀಡಿದ್ದರು. ಸಾಮಾನ್ಯವಾಗಿ ಈ ಜಾತಿಯ ಸೊಳ್ಳೆಗಳ ರೆಕ್ಕೆ ಸುಮಾರು 8 ಸೆಂ.ಮೀ ಉದ್ದವಿದ್ದರೆ ಚೀನಾದಲ್ಲಿನ ಸೊಳ್ಳೆಯ ರೆಕ್ಕೆ 11.15 ಸೆಂ.ಮೀ ಉದ್ದವಿತ್ತು. ಈ ಸೊಳ್ಳೆ ನೋಡಲು ಭಯಂಕರವಾಗಿದ್ದರೂ ಕೂಡ ರಕ್ತ ಹೀರುವುದಿಲ್ಲ. ವಯಸ್ಕ ಸೊಳ್ಳೆಗಳು ಕೇವಲ ಕೆಲವೇ ದಿನಗಳ ಕಾಲ ಬದುಕುತ್ತವಲ್ಲದೆ ಹೆಚ್ಚಾಗಿ ಮಕರಂದವನ್ನು ಹೀರುತ್ತವೆ ಎಂದು ಲೀ ಅವರು ತಿಳಿಸಿದ್ದಾರೆ.
Comments