ಮೋದಿ ಪರ ಪೋಸ್ಟ್- ಹೆಡ್ ಕಾನ್ಸ್ ಸ್ಟೇಬಲ್ ಅಮಾನತು
ದೇಶದ ಪ್ಪ್ರಧಾನಿ ನರೇಂದ್ರ ಮೋದಿ ಪರ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ರಾಣೇಬೆನ್ನೂರು ನಗರ ಠಾಣೆಯ ಹೆಡ್ ಕಾನ್ಸ್ ಸ್ಟೇಬಲ್ ಒಬ್ಬರನ್ನು ಅಮಾನತನ್ನು ಮಾಡಲಾಗಿದೆ.
ರಾಣೇಬೆನ್ನೂರು ನಗರ ಠಾಣೆಯ ಜಯಂತ ಬಳಿಗಾರ ಅಮಾನತಾದ ಹೆಡ್ ಕಾನ್ಸ್ ಸ್ಟೇಬಲ್ ಆಗಿದ್ದಾರೆ.. ಇವರು ಜಮ್ಮು ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ವಾಟ್ಸಪ್ ಗುಂಪಿನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು ಎನ್ನಲಾಗಿದೆ. ನಮ್ಮ ರಾಜ್ಯಕ್ಕೆ ಬೇಕು ಮೋದಿ ಬಲ ಎಂದು ಹೇಳಿ ಪೋಸ್ಟ್ ಮುಕ್ತಾಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಜಯಂತ ಅವರನ್ನು ಹುದ್ದೆಯಿಂದ ಅಮಾನತು ಮಾಡಿ ಎಂದು ಎಸ್ ಪಿ ಕೆ.ಪರಶುರಾಮ್ ಆದೇಶವನ್ನು ಹೊರಡಿಸಿದ್ದಾರೆ.
Comments