ಪ್ರಧಾನಿ ಮೋದಿ ಹತ್ಯೆಗೆ ಸಂಚು ನಡೆಯುತ್ತಿದೆಯಾ?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ಮಾಡಿದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬನನ್ನು ಇಲ್ಲಿನ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು 1998ರ ಕೊಯಮತ್ತೂರು ಸರಣಿ ಸ್ಫೋಟಕ್ಕೆ ಸಂಬಂಧಿಸಿ ಜೈಲು ಶಿಕ್ಷೆ ಪೂರ್ಣಗೊಳಿಸಿ ಬಿಡುಗಡೆ ಆಗಿದ್ದಾನೆ. ಪ್ರಧಾನಿ ಹತ್ಯೆಗೆ ಸಂಚು ರೂಪಿಸಿದ ಬಗ್ಗೆ ಆತ ನಡೆಸಿರುವ ದೂರವಾಣಿ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಕೊಯಮತ್ತೂರ್‌ನಲ್ಲಿ ವಾಸವಿರುವ ಆರೋಪಿಯು ಸಾರಿಗೆ ಗುತ್ತಿಗೆದಾರರೊಬ್ಬರ ಬಳಿ ದೂರವಾಣಿ ಮೂಲಕ ಮಾತನಾಡುವಾಗ ಹತ್ಯೆ ಸಂಚಿನ ವಿಷಯ ತಿಳಿಸಿದ್ದಾನೆ. ಎಂಟು ನಿಮಿಷಗಳ ದೂರವಾಣಿಯ ಸಂಭಾಷಣೆಯಲ್ಲಿ ಆತ ವಾಹನಗಳ ಹಣಕಾಸಿಗೆ ಸಂಬಂಧಿಸಿದಂತೆ ಮಾತನಾಡಿದ್ದಾನೆ. ಸಂಭಾಷಣೆಯ ಮಧ್ಯದಲ್ಲಿ ಹಠಾತ್ತಾಗಿ, 'ಮೋದಿಯನ್ನು ಹತ್ಯೆ ಮಾಡಲು ನಿರ್ಧರಿಸಿದ್ದೇವೆ. 1998ರಲ್ಲಿ ಎಲ್.ಕೆ.ಅಡ್ವಾಣಿ (ಬಿಜೆಪಿ ಹಿರಿಯ ನಾಯಕ) ನಗರಕ್ಕೆ ಭೇಟಿ ನೀಡಿದ್ದಾಗ ಬಾಂಬ್‌ಗಳನ್ನಿರಿಸಿದ್ದೆವು' ಎಂದು ಕೂಡ ಹೇಳಿದ್ದಾನಂತೆ. ಸಂಭಾಷಣೆ ಮತ್ತು ಮಾತುಕತೆ ನಡೆಸಿದ ವ್ಯಕ್ತಿಗಳ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ಮಾಹಿತಿಯನ್ನು ಈಗಾಗಲೇ ನೀಡಿದ್ದಾರೆ.
Comments