CBSE ಶಾಲೆಗಳಲ್ಲಿ ಇನ್ನು ಮುಂದೆ ಆಟದ ಅವಧಿ ಕಡ್ಡಾಯ
ಸಿಬಿಎಸ್‌ಇ ಪಠ್ಯಕ್ರಮ ಇರುವ ಶಾಲೆಗಳಿಗೆ ಹೊಸ ಮಾರ್ಗದರ್ಶನವನ್ನು ನೀಡಲಾಗಿದೆ. ಈ ಶಾಲೆಗಳಲ್ಲಿ ಇನ್ಮುಂದೆ ಪ್ರತಿನಿತ್ಯ ವಿದ್ಯಾರ್ಥಿಗಳಿಗೆ ಕ್ರೀಡಾ ಅವಧಿಯನ್ನು ಕಡ್ಡಾಯಗೊಳಿಸುವಂತೆ ಆಗಿದೆ. ವಿದ್ಯಾರ್ಥಿಗಳು ಆಟೋಟಗಳಲ್ಲಿ ಭಾಗಿಯಾಗಬೇಕು ಅನ್ನೋ ಕಾರಣಕ್ಕೆ ಈ ನಿಯಮವನ್ನು ಜಾರಿಗೆ ತರಲಾಗಿದೆ.
9 ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಯಾವ ರೀತಿಯ ಕ್ರೀಡೆಗಳನ್ನು ಹಮ್ಮಿಕೊಳ್ಳಬೇಕು ಎಂಬ ಬಗ್ಗೆ 150 ಪುಟಗಳ ವಿವರವನ್ನು ಸಹ ಶಾಲೆಗಳಿಗೆ ಈಗಾಗಲೆ ನೀಡಲಾಗಿದೆ. ಮಕ್ಕಳ ಆರೋಗ್ಯ ಮತ್ತು ದೈಹಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಲಾಗಿದೆ.
Comments