ಮತ್ತದೆ ಕೆಲಸ ಮಾಡಿ ಸುದ್ದಿಯಾದ್ರು ನಟಿ ದಿಯಾ ಮಿರ್ಜಾ
ಸೆಲೆಬ್ರಿಟಿಗಳಾಗಿರುವವರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಹೊಸದೇನಲ್ಲ. ಕೆಲವರು ಇದಕ್ಕೆಂದೇ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಕೈಯನ್ನು ಜೋಡಿಸಿದ್ದಾರೆ. ಬಾಲಿವುಡ್ ನಟಿ ದಿಯಾ ಮಿರ್ಜಾ ಕೂಡಾ ಭಾನುವಾರದಂದು ಇಂತಹ ಒಂದು ಸಾರ್ಥಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಭಾನುವಾರ ವಿಶ್ವ ಭೂಮಿ ದಿನವನ್ನು ಎಲ್ಲೆಡೆ ಆಚರಿಸಲಾಗಿದ್ದು, ಅದರಂತೆ ವಿಶ್ವಸಂಸ್ಥೆಯ ಪರಿಸರ ರಾಯಭಾರಿಯಾಗಿರುವಂತಹ ನಟಿ ದಿಯಾ ಮಿರ್ಜಾ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ನಾಗರಿಕರೊಂದಿಗೆ ಮುಂಬೈನ ದಾದರ್ ಬೀಚ್ ನಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಕೈಗೊಂಡಿದ್ದರು.ಸಾವಿರಾರು ಮಂದಿ ಸಾರ್ವಜನಿಕರ ಜೊತೆ ಯುವ ಸೇನೆ ಅಧ್ಯಕ್ಷರಾದ ಆದಿತ್ಯ ಠಾಕ್ರೆ ಕೂಡಾ ದಿಯಾ ಮಿರ್ಜಾರಿಗೆ ಈ ಕಾರ್ಯದಲ್ಲಿ ಸಾಥ್ ಅನ್ನು ನೀಡಿದ್ದರು. ಈ ಸಮಯದಲ್ಲಿ ಮಾತನಾಡಿದ ದಿಯಾ ಮಿರ್ಜಾ, ಪ್ರತಿಯೊಬ್ಬರು ತಮ್ಮ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ವಿಶ್ವ ಭೂಮಿ ದಿನವನ್ನು ತಮ್ಮದೇ ಹುಟ್ಟು ಹಬ್ಬದಂತೆ ಪ್ರತಿಯೊಬ್ಬರು ಸ್ವಚ್ಚತಾ ಕಾರ್ಯ ಮಾಡುವ ಮೂಲಕ ಆಚರಿಸಬೇಕೆಂದು ದಿಯಾ ಮಿರ್ಜಾ ತಿಳಿಸಿದರು.
Comments