ಮತ್ತೆ ಶುರುವಾಯ್ತು ಕಾಸ್ಟಿಂಗ್ ಕೌಚ್, ನಿರ್ಮಾಪಕನ ಮರ್ಯಾದೆ ಹರಾಜು ಹಾಕಿದ ಕನ್ನಡದ ನಟಿ

ಶ್ರೀ ರೆಡ್ಡಿಯ ಕಾಸ್ಟಿಂಗ್ ಕೌಚ್ ವಿವಾದದ ಬೆನ್ನಲ್ಲೆ ಸ್ಯಾಂಡಲ್ ವುಡ್ ನಲ್ಲೂ ಈ ವಿಚಾರವಾಗಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಸಿನಿಮಾ ಆಫರ್ ಗಾಗಿ ಅಡ್ಜೆಸ್ಟ್ ಮಾಡಿಕೊಳ್ಳಬೇಕು ಎನ್ನುವುದು ನಮ್ಮ ಕನ್ನಡದಲ್ಲೂ ಇದೆ ಎಂದು ಚಿತ್ರದ ನಾಯಕಿಯರು ಒಬ್ಬೊಬ್ಬರಾಗಿಯೇ ಹೇಳುತ್ತಿದ್ದಾರೆ.
ನಟಿ ಕೃಷಿ ತಾಪಂಡ ಸ್ಯಾಂಡಲ್ ವುಡ್ ನಲ್ಲಿ ಲೈಂಗಿಕ ಕಿರುಕುಳ ಇರುವುದರಿಂದ ಅದೆಷ್ಟೋ ಅವಕಾಶಗಳನ್ನ ಕಳೆದುಕೊಂಡಿದ್ದೇನೆ ಎನ್ನುವ ಸತ್ಯವನ್ನ ಜನರ ಮುಂದೆ ಬಿಚ್ಚಿಟ್ಟಿದ್ದಾರೆ. ಈಗ ಅದೇ ಸಾಲಿನಲ್ಲಿ ಮತ್ತೊಬ್ಬ ನಟಿ ಅಡ್ಜೆಸ್ಟ್ ಮಾಡಿಕೋ ಎಂದ ನಿರ್ಮಾಪಕನ ಮರ್ಯಾದೆಯನ್ನು ಬೀದಿಗೆ ತಂದಿದ್ದಾಳೆ.ಕೃಷಿತಾಪಂಡ ಆದ ಮೇಲೆ ಖುಷಿ ಶೆಟ್ಟಿ ಲೈಂಗಿಕ ಕಿರುಕುಳದ ಬಗ್ಗೆ ತಮಗಾದ ಅನುಭವವನ್ನ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.ನಟಿ ಖುಷಿ ಶೆಟ್ಟಿಗೆ ನಾಯಕಿ ಆಗುವ ಅವಕಾಶ ನೀಡುತ್ತೇವೆ. ತಮಿಳು ಸಿನಿಮಾದಲ್ಲಿ ಆಫರ್ ಬೇಕು ಅಂದ್ರೆ ನಿರ್ಮಾಪಕನ ಜೊತೆ ಅಡ್ಜೆಸ್ಟ್ ಮಾಡಿಕೊಳ್ಳಿ ಎಂದು ಎಂದು ಟಾಲಿವುಡ್ ಸಿನಿಮಾ ಮಂದಿ ಕೇಳಿದ್ದಾರೆಖುಷಿ ಶೆಟ್ಟಿ ಮಂಗಳೂರು ಮೂಲದ ನಟಿ. 'ಇದೀಗ ಬಂದ ಸುದ್ದಿ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದು 'ಚಂದ್ರಮುಖಿ', 'ಮಹಾನದಿ' ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. 'ಲೇರಿಯಾ' ಎನ್ನುವ ಕೊಂಕಣಿ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ 'ರಾಂಗ್ ಟರ್ನ್' ಚಿತ್ರದಲ್ಲಿ ನಾಯಕಿಯಾಗಿ ಆಕ್ಟ್ ಮಾಡುತ್ತಿದ್ದಾರೆ.ಇನ್ನು ಮುಂದೆ ಯಾಔ ಯವ ನಾಯಕಿಯರೂ ಕಾಸ್ಚಿಂಗ್ ಕೌಚ್ ಬಗ್ಗೆ ಮಾತನಾಡುತ್ತಾರೋ ಗೊತ್ತಿಲ್ಲ.
Comments