ನೀವು ಜನ್ ಧನ್ ಖಾತೆಯನ್ನು ಹೊಂದಿದ್ದೀರಾ? ಹಾಗದ್ರೆ ಇಲ್ಲಿದೆ ಒಂದು ಮಾಹಿತಿ
ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೊಂದಿಲ್ಲದ ಎಲ್ಲಾ ಜನರನ್ನು ಖಾತೆದಾರರನ್ನಾಗಿ ಮಾಡುವ ಉದ್ದೇಶದಿಂದ ರೂಪಿಸಿದ್ದ ಜನ್ ಧನ್ ಯೋಜನೆಗೆ ಇದೀಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜನ್ ಧನ್ ಖಾತೆಗಳಲ್ಲಿ ಮಾರ್ಚ್ 31 ರ ವೇಳೆಗೆ ಠೇವಣಿ ಮೊತ್ತ 80,545 ಕೋಟಿ ರೂ ಹೆಚ್ಚು ದಾಟಿದೆ. 2016 ರ ನವೆಂಬರ್ ನಲ್ಲಿ ಜನ್ ಧನ್ ಖಾತೆ ಗಳಲ್ಲಿ ಸಂಗ್ರಹವಾದ ಠೇವಣಿ 45,300 ಕೋಟಿ ರೂ. ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಸಮಯದಲ್ಲಿ ಜನ್ ಧನ್ ಖಾತೆಗಳಿಗೆ ಹೆಚ್ಚಿನ ಮೊತ್ತ ಜಮೆ ಆಗಿದ್ದರಿಂದ 74,000 ಕೋಟಿ ರೂ. ಗೆ ಏರಿಕೆಯಾಗಿತ್ತು ಎನ್ನಲಾಗಿದೆ.ನಂತರದಲ್ಲಿ ಠೇವಣಿ ಹಣ ಕಡಿಮೆಯಾಗಿ 2017 ರ ಮಾರ್ಚ್ ಬಳಿಕ ಸ್ಥಿರತೆ ಕಾಯ್ದುಕೊಂಡಿದೆ ಎಂದು ಹೇಳಲಾಗಿದೆ. ಕಳೆದ ವಾರ ವಿಶ್ವ ಬ್ಯಾಂಕ್ ಬಿಡುಗಡೆ ಮಾಡಿದ್ದ ವರದಿಯಲ್ಲಿ ಜನ್ ಧನ್ ಖಾತೆಯ ಯಶಸ್ಸಿನ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ. ಜನ್ ಧನ್ ಖಾತೆಯಲ್ಲಿ ಠೇವಣಿ 80,545 ಕೋಟಿ ರೂ. ದಾಟಿದೆ ಎಂದು ಕೇಂದ್ರ ಸರ್ಕಾರ ಈಗಾಗಲೆ ತಿಳಿಸಿದೆ. ಜನ್ ದನ್ ಖಾತೆಯನ್ನು ಹೊಂದಿರುವವರಿಗೆ ಈ ಮೂಲಕ ಖುಷಿಯಾಗುವುದು ಖಂಡಿತ.
Comments