ಕತ್ತೆ ಹಾಲಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್!

ಇನ್ನು ಮುಂದೆ ಯಾರನ್ನು ಕೆಲಸಕ್ಕೆ ಬಾರದವರು ಅಂತ ಬೈಯೋಕು ಮೊದಲೆ ಸ್ವಲ್ಪ ಯೋಚನೆ ಮಾಡಿ. ಯಾರನ್ನು ಕತ್ತೆಗಳೆಂದು ಹೇಳುವಂತಿಲ್ಲ.
ಕತ್ತೆ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಇದೆ ಎಂಬ ನಂಬಿಕೆಯಿಂದ ಈ ಹಾಲಿಗೆ ಈಗ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಪ್ರತಿ ಕತ್ತೆಯಿಂದ ದೊರೆಯುವ ಹಾಲಿನಿಂದ 500 ರೂ.ಗಳವರೆಗೆ ಸಂಪಾದನೆಯಾಗುತ್ತಿದೆ ಎಂಬುದು ತಿಳಿದುಬಂದಿದೆ. ಕತ್ತೆ ಹಾಲನ್ನು ಚಿಕ್ಕ ಮಕ್ಕಳಿಗೆ ಕುಡಿಸುವುದರಿಂದ ಬುದ್ದಿ ಚುರುಕಾಗುತ್ತದೆ. ಅವರಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಕತ್ತೆ ಹಾಲಿಗೆ ಬೇಡಿಕೆ ಸೃಷ್ಟಿಯಾಗಿದ್ದು, ಕತ್ತೆ ಸಾಕಿದವರು ಹಾಲನ್ನು ಬಯಸಿದವರ ಮನೆ ಮುಂದೆಯೇ ಮಾರಿ ಹೋಗುತ್ತಾರೆ.
Comments