ಚುನಾವಣಾ ಪ್ರಚಾರಕ್ಕೆ ಬರಲು ಒಪ್ಪಿಕೊಂಡ ನಟ ಯಶ್, ಆದ್ರೆ ಕಂಡಿಷನ್ ಏನ್ ಗೊತ್ತಾ?

ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸ್ಟಾರ್ ಪ್ರಚಾರಕರು ಪ್ರಚಾರ ಮಾಡುವುದು ಕಾಮನ್ ಅನ್ನುವುದು ಎಲ್ಲರಿಗೂ ಕೂಡ ಗೊತ್ತು. ಸಿನಿಮಾ ತಾರೆಯರೆಲ್ಲರೂ ಚುನಾವಣಾ ಪ್ರಚಾರ ಮಾಡುವ ಕಾರ್ಯಕ್ಕೆ ಮುಂದಾದರೆ ರಾಕಿಂಗ್ ಸ್ಟಾರ್ ಯಶ್ ಮಾತ್ರ ಯಾವ ಪಕ್ಷದ ಪರ ಪ್ರಚಾರಕ್ಕೆ ಬರುವುದಿಲ್ಲ ಎಂದು ತಿಳಿಸಿದ್ದರು. ಆದರೆ ಇದೀಗ ಒಂದು ಕಂಡಿಷನ್ ಹಾಕಿದ್ಧಾರೆ. ಇದಕ್ಕೆ ಯಾವ ರಾಜಕಾರಣಿಗಳು ಸಹಾಯ ಮಾಡುತ್ತಾರೋ ಅವರ ಪರ ಪ್ರಚಾರ ಮಾಡುವುದಾಗಿ ರಾಕಿಂಗ್ ಸ್ಟಾರ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ನಟ ಯಶ್ ಅವರು,' ಪ್ರತಿ ಒಂದು ಕ್ಷೇತ್ರದಲ್ಲಿಯೂ ಅನೇಕ ರೀತಿಯ ಸಮಸ್ಯೆಯಿದೆ. ಹೀಗಾಗಿ ಯಾವುದೋ ಒಂದು ಪಕ್ಷದ ಪರ ಪ್ರಚಾರ ಮಾಡುವ ಬಗ್ಗೆ ನಾನು ನಿರ್ಧಾರ ಮಾಡಿಲ್ಲ. ರಾಜಕಾರಣದಲ್ಲಿ ಸಾಕಷ್ಟು ಜನ ಸ್ನೇಹಿತರಿದ್ದಾರೆ. ಎಲ್ಲರೂ ಬಂದು ಪ್ರಚಾರ ಮಾಡುವ ಬಗ್ಗೆ ನನ್ನ ಬಳಿ ಕೇಳುತ್ತಿದ್ದಾರೆ. ನಾನು ಪ್ರಚಾರ ಮಾಡ್ತೀನಿ ಅಂದರೂ, ನಾಳೆ ಏನಾದರೂ ಹೆಚ್ಚು ಕಮ್ಮಿ ಆದರೆ ಜನ ನನ್ನನ್ನ ಕೇಳ್ತಾರೆ. ಬೆಂಗಳೂರಲ್ಲಿ 5ಲಕ್ಷ ಮರಗಳನ್ನು ನೆಡಬೇಕು ಅಂತಿದ್ದೀನಿ. ಇದಕ್ಕೆ ಯಾರು ಸಹಾಯ ಮಾಡುತ್ತಾರೋ,ಅವರ ಪರ ನಾನು ಪ್ರಚಾರ ಮಾಡುತ್ತೇನೆ. ಜನರಿಗೆ ಒಳ್ಳೆಯದ್ದು ಆಗುತ್ತೆ ಅಂದ್ರೆ ನಾನು ಸಹಾಯ ಮಾಡುತ್ತೇನೆ ಎಂದು ರಾಕಿಂಗ್ ಸ್ಟಾರ್ ಯಶ್ ತಿಳಿಸಿದ್ದಾರೆ.
Comments