700 ವರ್ಷದ ಹಳೆಯ ಆಲದ ಮರಕ್ಕೆ ಡ್ರಿಪ್ಸ್ ಹಾಕಿ ಚಿಕಿತ್ಸೆ!
ಪ್ರಕೃತಿ ನಮಗೆ ಏನೆಲ್ಲಾ ನೀಡಿದೆ.ಅದನ್ನ ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ… ಹಾಗಾಗಿಯೇ 700 ವರ್ಷ ಹಳೆಯ ಆಲದ ಮರವನ್ನು ರಕ್ಷಿಸಲು ತೆಲಂಗಾಣದ ಅಧಿಕಾರಿಗಳು ಡ್ರಿಪ್ಸ್ ಹಾಕಿ ಚಿಕಿತ್ಸೆಯನ್ನು ನೀಡುತ್ತಿದ್ದಾರೆ.
ಮರದ ಕೆಲವು ಕೊಂಬೆಗಳಿಗೆ ಗೆದ್ದಲು ಹಿಡಿದಿದೆ. ಮರವನ್ನು ಗೆದ್ದಲಿನಿಂದ ಉಳಿಸಲು ಅಧಿಕಾರಿಗಳು ಕ್ರಿಮಿನಾಶಕವನ್ನು ಡ್ರಿಪ್ ಮೂಲಕ ಕೊಂಬೆಗಳಿಗೆ ಕ್ರಿಮಿನಾಶಕ ವನ್ನು ನೀಡುತ್ತಿದ್ದಾರೆ. ಮಹಬೂಬ್ ನಗರದಲ್ಲಿರುವ ಪಿಳ್ಳಲಮರಿ ಅಥವಾ ಪೀರ್ಲಾ ಮರ್ರಿ ಎಂದು ಕರೆಯಲ್ಪಡುವ ಪ್ರಸಿದ್ಧವಾದ ಪ್ರವಾಸಿ ತಾಣದಲ್ಲಿ ಈ ಆಲದ ಮರ ಮೂರು ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ. ಪ್ರಪಂಚದಲ್ಲೇ ಎರಡನೇ ದೊಡ್ಡ ಆಲದ ಮರ ಕೂಡ ಇದಾಗಿದೆ.ಗೆದ್ದಲು ಹುಳಗಳಿಂದ ಮರವನ್ನು ಸಂರಕ್ಷಿಸಲು ಪ್ರತಿ ಎರಡು ಮೀಟರ್ ಗೆ ರಾಸಾಯನಿಕ ಕ್ಲೋರಿಪಿರಿಫೊಸ್ ಕ್ರಿಮಿನಾಶಕವನ್ನು ಡ್ರಿಪ್ ಮೂಲಕ ಮರಕ್ಕೆ ಕೊಡಲಾಗುತ್ತಿದೆ. ರಾಸಾಯನಿಕ ಇರುವ ನೀರನ್ನು ಮರಕ್ಕೆ ನೀಡಲಾಗುತ್ತಿದೆ. ಗೆದ್ದಲು ಹಿಡಿದು ಬೀಳುವಂತೆ ಆಗಿರುವ ದೊಡ್ಡ ಕೊಂಬೆಗಳಿಗೆ ಬೀಳದಂತೆ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾ ಅರಣ್ಯಾಧಿಕಾರಿ ಚುಕ್ಕಾ ಗಂಗಾ ರೆಡ್ಡಿ ಅವರು ತಿಳಿಸಿದ್ದಾರೆ.
Comments