ಗರ್ಭಿಣಿಯರೇ ವಿಟಮಿನ್ ಸಿ ಇರುವ ಹಣ್ಣುಗಳ ಬಗ್ಗೆ ಎಚ್ಚರವಿರಲಿ..!

ಪ್ರತಿನಿತ್ಯವು ಒತ್ತಡದ ಜೀವನ, ಕಲುಷಿತ ವಾತಾವರಣ, ಆರೋಗ್ಯಕರವಲ್ಲದ ದೈಹಿಕ ಪಾಲನೆಗಳು ಇಂತಹ ಕೆಲವು ಅಂಶಗಳಿಂದ ಹೆಣ್ಣು ಇಂದು ತಾಯ್ತನವನ್ನು ಉಳಿಸಿಕೊಳ್ಳುವಲ್ಲಿ ಹೋರಾಡಬೇಕಾಗಿದೆ. ಜೊತೆಗೆ ಉತ್ತಮ ಪೌಷ್ಟಿಕಾಂಶವಿರುವ ಆಹಾರಗಳ ಸೇವನೆಯತ್ತ ಕೂಡ ಆಕೆ ಗಮನ ಹರಿಸಬೇಕಾದ್ದು ತೀರಾ ಅಗತ್ಯವಾಗಿದೆ.
ಅತಿಯಾದರೆ ಅಮೃತ ಕೂಡ ವಿಷ ಎಂಬ ಮಾತಿನಂತೆ ಗರ್ಭಿಣಿಯರು ತೆಗೆದುಕೊಳ್ಳುವ ಆಹಾರಗಳತ್ತ ಸೂಕ್ತ ತನಿಖೆಯನ್ನು ಮಾಡಿಯೇ ಆಕೆ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಅದರಿಂದಲೇ ಗರ್ಭಪಾತವಾಗುವ ಸಂಭವ ಹೆಚ್ಚಾಗಿರುತ್ತದೆ.ಪ್ರೊಜೆಸ್ಟೊರಾನ್ ಎಂಬ ಹಾರ್ಮೋನು ಭ್ರೂಣವನ್ನು ಹೆರಿಗೆಗಾಗಿ ತಯಾರಿಯನ್ನು ಮಾಡುತ್ತದೆ. ಈ ಹಾರ್ಮೋನು ಅನ್ನು ಸ್ತ್ರೀ ದೇಹವು ಸಾಕಷ್ಟು ಪ್ರಮಾಣದಲ್ಲಿ ವಿಸರ್ಜಿಸದೇ ಇದ್ದಲ್ಲಿ ಗರ್ಭಧಾರಣೆಯನ್ನು ಮಾಡಲು ಭ್ರೂಣವು ಸಿದ್ಧಗೊಳ್ಳುವುದಿಲ್ಲ. ವಿಟಮಿನ್ ಸಿ ಅಲ್ಲಿರುವ ಆಸ್ಕೊರ್ಬಿಕ್ ಆಸಿಡ್ ಪ್ರೊಜೆಸ್ಟೊರಾನ್ ಹಾರ್ಮೋನಿಗೆ ಹಾನಿಯನ್ನುಂಟು ಮಾಡಿ ಮಗುವಿನ ಹುಟ್ಟುವಿಕೆಗೆ ತೊಂದರೆಯನ್ನುಂಟು ಮಾಡುತ್ತದೆ. ಗರ್ಭಿಣಿಯು ಹೆಚ್ಚು ಪ್ರಮಾಣದಲ್ಲಿ ವಿಟಮಿನ್ ಸಿ ಯುಳ್ಳ ಹಣ್ಣುಗಳನ್ನು ತೆಗೆದುಕೊಂಡಲ್ಲಿ ಈ ಹಾರ್ಮೋನ್ ಸರಿಯಾಗಿ ಆಗದೆಯೇ ಶಿಶು ಹೊಟ್ಟೆಯಲ್ಲಿಯೇ ಸಾವನ್ನಪ್ಪಬಹುದು.. ಈ ವಿಟಮಿನ್ ಕೂಡ ಗರ್ಭಿಣಿ ಮಹಿಳೆಯರಿಗೆ ಹಾನಿ ಉಂಟುಮಾಡಬಹುದು. ಅವರಿಗೆ, ವಿಟಮಿನ್ ಸಿ ಮಿತಿಮೀರಿದ ಪ್ರಮಾಣ ಗರ್ಭಪಾತಕ್ಕೆ ಕಾರಣವಾಗುತ್ತದೆ. ವಿಟಮಿನ್ ಸಿ ಒಳಗೊಂಡಿರುವ ಆಸ್ಕೋರ್ಬಿಕ್ ಆಮ್ಲದಿಂದ ಉತ್ಪತ್ತಿಯಾಗುವ ಆಮ್ಲೀಯತೆಯು ಹಾರ್ಮೋನ್ - ಈಸ್ಟ್ರೊಜೆನ್ ಉತ್ಪಾದನೆಯ ಪ್ರಕ್ರಿಯೆಯನ್ನು ಹಸ್ತಕ್ಷೇಪ ಮಾಡುವ ಪ್ರವೃತ್ತಿಯನ್ನು ಹೊಂದಿದೆ. ಇದು ದೇಹದ ಲೈಂಗಿಕ ಹಾರ್ಮೋನ್ಗಳ ಪ್ರಮಾಣದಲ್ಲಿ ಸಂಪೂರ್ಣ ಅಸಮತೋಲನವನ್ನು ಉಂಟುಮಾಡುತ್ತದೆ ಮತ್ತು ಇದರಿಂದಾಗಿ ಗರ್ಭಪಾತವಾಗುವ ಸಂಭವ ಹೆಚ್ಚಾಗಿರುತ್ತದೆ. ಆದ್ದರಿಂದ ಗರ್ಭಿಣಿಯರು ತಮ್ಮ ಆರೋಗ್ಯದ ಕಡೆ ಕಾಳಜಿಯನ್ನು ಮಾಡಬೇಕು.
Comments