ಲೈಂಗಿಕ ಕಿರುಕುಳದ ಬಗ್ಗೆ ಕೃಷಿ ತಾಪಂಡ ಹೇಳಿದ್ದೇನು?

ಒಂದಾದ ಮೇಲೆ ಒಂದರಂತೆ ಬಣ್ದದ ಜಗತ್ತಿನಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಮಾತುಗಳು ಕೇಳಿ ಬರುತ್ತಲೇ ಇದೆ. ಕಾಸ್ಟಿಂಗ್ ಕೌಚ್ ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ ಅಕ್ಕ -ಪಕ್ಕದ ಸಿನಿಮಾರಂಗದಲ್ಲಿಯೂ ಇದರ ವಿಚಾರ ಹೆಚ್ಚಾಗಿಯೆ ಇದೆ.
ಇರುವ ಲೈಂಗಿಕ ಕಿರುಕುಳದ ಬಗೆಗಿನ ಸುದ್ದಿ ಸ್ವಲ್ಪ ಮಟ್ಟಿಗೆ ತಣ್ಣಗಾಯ್ತು ಎನ್ನುವಾಗಲೇ ನಟಿ ಕೃಷಿ ತಾಪಂಡ ಲೈಂಗಿಕ ಕಿರುಕುಳದ ಬಗ್ಗೆ ಮತ್ತೆ ಮಾತನಾಡಿದ್ದಾರೆ. ಮೂರು ದಿನಗಳ ಹಿಂದೆಯಷ್ಟೇ ಈ ರೀತಿಯ ಅನುಭವ ನನಗಾಗಿದೆ ಎಂದು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಅಕಿರ, ಎರಡು ಕನಸು ಸಿನಿಮಾಗಳಲ್ಲಿ ಅಭಿನಯಿಸ ಕನ್ನಡ ಸಿನಿಮಾರಂಗದಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿರುವ ನಟಿ ಕೃಷಿ ತಾಪಂಡ ಸಿನಿಮಾರಂಗದಲ್ಲಿರುವ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದರು. ಸ್ಯಾಂಡಲ್ ವುಡ್ ನಲ್ಲೂ ಕೂಡ ಕಾಸ್ಟಿಂಗ್ ಕೌಚ್ ಇದೆ. ಕಾಂಪ್ರಮೈಸ್ ಗೆ ಒಪ್ಪಿಲ್ಲ ಅನ್ನೋ ಕಾರಣಕ್ಕೆ ಸಾಕಷ್ಟು ಪ್ರಾಜೆಕ್ಟ್ ಕೂಡ ನನ್ನ ಕೈ ತಪ್ಪಿ ಹೋಗಿವೆ. ನನಗೂ ಈ ಅನುಭವ ಆಗಿದೆ ಎಂದಿದ್ದಾರೆ.
Comments