ಡ್ರೈವಿಂಗ್ ಲೈಸೆನ್ಸ್ ವಿಷಯದಲ್ಲಿ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ

ಟ್ಯಾಕ್ಸಿ, ತ್ರಿಚಕ್ರ ವಾಹನಗಳು, ಇ- ರಿಕ್ಷಾಗಳು ಹಾಗೂ ದ್ವಿಚಕ್ರ ವಾಹನ ಚಲಾಯಿಸಲು ಇನ್ನು ಮುಂದೆ ಯಾವುದೆ ವಿಶೇಷ ವಾಣಿಜ್ಯ ಲೈಸನ್ಸ್ ಅಗತ್ಯವಿರುವುದಿಲ್ಲ. ಈ ವಿಭಾಗದಲ್ಲಿ ಕೆಲಸ ಮಾಡುವ ವಾಣಿಜ್ಯ ಚಾಲಕರಿಗೆ ತಮ್ಮ ವೈಯಕ್ತಿಕ ಚಾಲನಾ ಪರವಾನಗಿಯನ್ನೇ ಉಪಯೋಗಿಸಲು ಸರ್ಕಾರ ಈಗಾಗಲೆ ಅನುಮತಿಯನ್ನು ನೀಡಿದೆ.
ಡ್ರೈವಿಂಗ್ ಲೈಸೆನ್ಸ್ ವಿಚಾರವಾಗಿ ಕೇಂದ್ರ ಸರ್ಕಾರ ಶುಭ ಸುದ್ದಿಯೊಂದನ್ನು ನೀಡಿದೆ. ಲಘು ವಾಹನಗಳ ಚಾಲಕರಿಗೆ ಖಾಸಗಿ ವಾಹನಗಳಿಗೆ ನೀಡುವ ಲೈಸೆನ್ಸ್ ವಿತರಿಸುವಂತೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ. ಬಸ್, ಟ್ರಕ್ ಸೇರಿದಂತೆ ಮಧ್ಯಮ ಮತ್ತು ದೊಡ್ಡ ಗಾತ್ರದ ವಾಹನಗಳ ಚಾಲನೆ ಮಾಡುವವರಿಗೆ ವಾಣಿಜ್ಯ ಡ್ರೈವಿಂಗ್ ಲೈಸೆನ್ಸ್ ಅಗತ್ಯವಾಗಿದೆ ಎಂದು ಹೇಳಲಾಗಿದೆ.
Comments