ಎಟಿಎಂಗಳಲ್ಲಿನ ನೋಕ್ಯಾಸ್ ಗೆ ಎಸ್ ಬಿಐ ನ ಹೊಸ ಸೂತ್ರ

ಕರ್ನಾಟಕ ರಾಜ್ಯ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಇದ್ದಕ್ಕಿದ್ದಂತೆ ಎಟಿಎಂಗಳಲ್ಲಿ ನೋಟಿನ ಅಭಾವ ಎದುರಾಗಿದೆ. ಗ್ರಾಹಕರು ಪಡುತ್ತಿರುವ ಕಷ್ಟವನ್ನು ತಪ್ಪಿಸಲು ಎಸ್ ಬಿಐ ಹೊಸದೊಂದು ಯೋಜನೆಯನ್ನು ರೂಪಿಸಿದೆ.
ಭಾರತದ ಅತೀ ದೊಡ್ಡ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿರುವ ಎಸ್ ಬಿಐ ತನ್ನ ಗ್ರಾಹಕರಿಗೆ ಪಿಒಎಸ್ ಮೆಷಿನ್ ಬಳಸಿ ಹಣ ಡ್ರಾ ಮಾಡಿಕೊಳ್ಳಲು ಈಗಾಗಲೇ ಸೂಚಿಸಿದೆ. ಈ ಮೆಷಿನ್ ಬಳಸಿ ಎಸ್ ಬಿಐ ಅಥವಾ ಬೇರೆ ಬ್ಯಾಂಕ್ ಗಳ ಡೆಬಿಟ್ ಕಾರ್ಡ್ ಇರುವವರೂ ಹಣ ಡ್ರಾ ಮಾಡಿಕೊಳ್ಳಬಹುದು. ಈ ನಡುವೆ ಕರ್ನಾಟಕದ ಎಟಿಎಂಗಳಲ್ಲಿ ಹಣದ ಅಭಾವ ಎದುರಾಗಿರುವುದಕ್ಕೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಹಣಕಾಸು ಇಲಾಖೆ ಸ್ಪಷ್ಟನೆಯನ್ನು ಕೂಡ ನೀಡಿದೆ.
Comments