ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಲು ಇದನ್ನು ಟ್ರೈ ಮಾಡಿ

ಅಕ್ಕಿ ಹಿಟ್ಟಿನಿಂದ ನಿಮ್ಮ ತ್ವಚೆಯನ್ನು ಕಾಪಾಡಿಕೊಳ್ಳುವುದು ಹೇಗೆ ಅಂತ ತಿಳಿದುಕೊಳ್ಳಿ.ಅಕ್ಕಿ ಹಿಟ್ಟು ನಮ್ಮ ತ್ವಚೆಗೆ ತುಂಬಾ ಒಳ್ಳೆಯದು. ಚರ್ಮವನ್ನು ಮೃದುವಾಗಿಸುತ್ತದೆ. ಅಕ್ಕಿ ಹಿಟ್ಟಿನೊಂದಿಗೆ ಹಾಲನ್ನು ಬಳಸಿಕೊಂಡು ಮುಖದ ಕಾಂತಿಯನ್ನು ಇನ್ನಷ್ಟು ಹೆಚ್ಚು ಮಾಡಿಕೊಳ್ಳಬಹುದು.
ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು ಮತ್ತು ಹಾಲನ್ನು ತೆಗೆದುಕೊಳ್ಳಿ ಇದನ್ನು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಬೇಕಾದಷ್ಟು ಹಾಲು ಸೇರಿಸಿಕೊಳ್ಳಿ ನಿಮ್ಮ ಮುಖಕ್ಕೆ ಈ ಪ್ಯಾಕ್ ಅನ್ನು ಹಚ್ಚಿಕೊಂಡು 20-30 ನಿಮಿಷ ಹಾಗೆಯೇ ಬಿಡಿ ನಂತರ ತಣ್ಣಗಿನ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ನಂತರ ನಿಮ್ಮ ತ್ವಚೆಯನ್ನು ನೀವೆ ಗಮನಿಸಿ. ವಾರಕ್ಕೆ ಮೂರು ಬಾರಿ ಹೀಗೆ ಮಾಡುವುದರಿಂದ ನಿಮ್ಮ ಮುಖದ ಕಾಂತಿ ಹೆಚ್ಚಾಗುತ್ತದೆ.
Comments