ಚಿನ್ನದ ಬೆಲೆ ಗಗನಕುಸಮವಾಗಿದ್ದರೂ ಮಾರಾಟವಾದ ಚಿನ್ನ ಎಷ್ಟು ಗೊತ್ತಾ?
ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿ ಮಾಡಿದರೆ ಒಳ್ಳೆದಾಗುತ್ತೆ ಎಂಬ ನಂಬಿಕೆಯಿಂದ ಚಿನ್ನ ಖರೀದಿಗೆ ಜನ ಮುಗಿ ಬೀಳುತ್ತಾರೆ. ಈ ಸಲದ ಅಕ್ಷಯ ತೃತೀಯದ ದಿನದಂದು ಚಿನ್ನಾಭರಣ ವರ್ತಕರು ಭರ್ಜರಿ ವಹಿವಾಟುವನ್ನೆ ನಡೆಸಿದ್ದಾರೆ.
ಚಿನ್ನದ ಬೆಲೆಯಲ್ಲಿ ಗಗನಕುಸುಮವಾಗಿದ್ದರೂ ಜನರ ಚಿನ್ನ ಖರೀದಿ ಮಾಡುವುದನ್ನು ನಿಲ್ಲಿಸಿಲ್ಲ. ರಾಜ್ಯದಲ್ಲಿ ಅಕ್ಷಯ ತೃತೀಯ ಪ್ರಯುಕ್ತ ಸುಮಾರು 3495 ಕೆ.ಜಿ. ಚಿನ್ನ, 2325 ಕೆ.ಜಿ. ಬೆಳ್ಳಿ ಮಾರಾಟವಾಗಿದ್ದು, ಸುಮಾರು 1100 ಕೋಟಿ ರೂ. ವಹಿವಾಟನ್ನು ನಡೆಸಲಾಗಿದೆ. ಚಿನ್ನದ ದರವು ಪ್ರತಿ ಗ್ರಾಂಗೆ 250 ರೂ. ವರೆಗೂ ಏರಿಕೆಯಾಗಿ ಬೆಲೆ ಗಗನಕ್ಕೇರಿದ್ದರೂ, ಚಿನ್ನ ಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಕೆಲವು ಚಿನ್ನಾಭರಣ ಅಂಗಡಿಗಳಲ್ಲಿ ಬೆಳಿಗ್ಗೆ 6 ಗಂಟೆಗೆ ವ್ಯಾಪಾರ ಆರಂಭವಾಗಿ ತಡರಾತ್ರಿವರೆಗೂ ವ್ಯಾಪರವನ್ನು ನಡೆಸಿದ್ದಾರೆ.
Comments