ಚುನಾವಣೆ ದಿನ ನೋ ಸಿನಿಮಾ… ನೋ ಶಾಪಿಂಗ್
ರಾಜ್ಯ ವಿಧಾನಸಭಾ ಚುನಾವಣಾ ಹಿನ್ನಲೆಯ ದಿನದಂದು ಹೇಗೂ ರಜೆ ಇದೆ ಸಿನಿಮಾ ನೋಡಿಕೊಂಡು ಅಥವಾ ಸುತ್ತಾಡಿಕೊಂಡು ಬರೋಣ ಎನ್ನುವ ಪ್ಲ್ಯಾನ್ ಏನಾದರು ಇದ್ದರೆ ಅದನ್ನು ಈಗಲೆ ನಿಮ್ಮ ತಲೆಯಿಂದ ತೆಗೆದುಬಿಡಿ. ಮುಂದಿನ ಐದು ವರ್ಷಕ್ಕೆ ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸಲುವಾಗಿ ಮತದಾನ ಮಾಡುವುದನ್ನು ಬಿಟ್ಟು ಶಾಪಿಂಗ್ , ಸಿನಿಮಾ ಎಂದು ಕಾಲ ಕಳೆಯುವವರಿಗೆ ಚುನಾವಣಾ ಆಯೋಗ ಬಿಗ್ ಶಾಕ್ ನೀಡಲು ಮುಂದಾಗಿದೆ.
ಮತದಾನದ ಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಆಯೋಗ ಸಾಕಷ್ಟು ಕಸರತ್ತು ನಡೆಸುತ್ತಿದೆ. ಅದಕ್ಕಾಗಿಯೇ ಹಲವು ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. .ಜಾಹಿರಾತಿನ ಮೂಲಕ, ಸೆಲೆಬ್ರಿಟಿಗಳಿಂದ ಹೇಳಿಕೆಗಳನ್ನು ಕೊಡಿಸುವ ಮೂಲಕ ಮತದಾನ ಮಾಡುವಂತೆ ಜನರನ್ನು ಪ್ರೇರೇಪಿಸಲಾಗುತ್ತಿದೆ.ಮತದಾನದ ದಿನ ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಮಲ್ಟಿಪ್ಲೆಕ್ಸ್ ಶಾಪಿಂಗ್ ಮಾಲ್ ಗಳಿಗೆ ಬೀಗ ಹಾಕುವ ಕುರಿತು ಚಿಂತನೆಯನ್ನು ನಡೆಸಲಾಗುತ್ತಿದೆ. ಈ ವಿಷಯವಾಗಿ ಕುರಿತಂತೆ ಚುನಾವಣಾ ಆಯೋಗವು ಮೌಖಿಕವಾಗಿ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚನೆಯನ್ನು ನೀಡಿದೆ. ಕೇಂದ್ರ ಆಯೋಗವು ಅಧಿಕೃತವಾಗಿ ಅನುಮೋದನೆಯನ್ನು ನೀಡಿದ್ದೆ ಆದ್ದಲಿ ಮೇ.12ರ ಸಂಜೆ 6 ಗಂಟೆಯವರೆಗೆ ಬೆಂಗಳೂರಿನ ಶಾಪಿಂಗ್ ಮಾಲ್, ಮಲ್ಟಿಪ್ಲೆಕ್ಸ್ ಗಳಿಗೆ ಬೀಗ ಹಾಕುವುದು ಖಂಡಿತ.
Comments