ಕರಬೂಜ ಹಣ್ಣಿನಿಂದ ಇಷ್ಟೆಲ್ಲಾ ಪ್ರಯೋಜನ ಇದೆಯಾ?
ಬೇಸಿಗೆ ಬಂತೆಂದರೆ ಸಾಕು ಬಾಯಾರಿಕೆಯಾಗುವುದು ಒಂಥರಾ ಸುಸ್ತು ಆಗುವುದು ಕಾಮನ್. ಆ ಸಮಯದಲ್ಲಿ ನಾವು ಹಣ್ಣಿನ ಜ್ಯೂಸ್ ಅನ್ನು ಕುಡಿಯಲು ಇಷ್ಟ ಪಡುತ್ತೇವೆ. ಯಾವುದೋ ಹಣ್ಣಿನ ಜ್ಯೂಸ್ ಅನ್ನು ಕುಡಿಯುವ ಬದಲು ನಮ್ಮ ದೇಹಕ್ಕೆ ಆರೋಗ್ಯಕರ ಎನಿಸುವ ಜ್ಯೂಸ್ ಅನ್ನು ಕುಡಿದರೆ ಉತ್ತಮ. ಅಂತಹ ಹಣ್ಣುಗಳಲ್ಲಿ ಕರಬೂಜ ಕೂಡ ಒಂದು.
ಈ ಹಣ್ಣು ಬೇಸಿಗೆಯ ಹಣ್ಣಾಗಿದ್ದು ಇತರ ಕರಬೂಜ ಹಣ್ಣುಗಳಂತೆಯೇ ಸಿಹಿಯಾದ ಮತ್ತು ಹೆಚ್ಚು ನೀರಿನಂಶವನ್ನು ಹೊಂದಿರುತ್ತದೆ.. ಈ ಹಣ್ಣಿನ ಸೇವನೆಯಿಂದ ವಿಶೇಷವಾಗಿ ಬೇಸಿಗೆಯಲ್ಲಿ ಎದುರಾಗುವ ನಿರ್ಜಲೀಕರಣದಿಂದ ಪಾರಾಗಬಹುದು. ಈ ಹಣ್ಣಿನಲ್ಲಿ ಕರಗುವ ನಾರು, ಬೀಟಾ ಕ್ಯಾರೋಟೀನ್, ಪೊಟ್ಯಾಶಿಯಂ, ಕಬ್ಬಿಣ, ಮ್ಯಾಂಗನೀಸ್, ಫೋಲಿಕ್ ಆಮ್ಲ, ವಿಟಮಿನ್ ಎ, ಸಿ ಇತರ ಪ್ರಮುಖ ಪೋಷಕಾಂಶಗಳಿವೆ. ಈ ಕರಬೂಜ ಹಣ್ಣು ರುಚಿಕರ ಮಾತ್ರವಲ್ಲ,
ಈ ಹಣ್ಣಿನಿಂದ ನಾವು ಪಡೆಯುವ ಪ್ರಯೋಜನಗಳು ಈ ಕೆಳಗಿವೆ.
- ಮಧುಮೇಹಿಗಳಿಗೆ ಈ ಹಣ್ಣು ಸೂಕ್ತ.
- ತೂಕ ಇಳಿಸಲು ನೆರವಾಗುತ್ತದೆ.
- ಕಿಡ್ನಿ ಸಮಸ್ಯೆಯನ್ನು ನಿವಾರಿಸುತ್ತದೆ.
- ಜೀರ್ಣಶಕ್ತಿಗೆ ನೆರವಾಗುತ್ತದೆ.
- ಹೃದಯ ಸಂಬಂಧಿ ಕಾಯಿಲೆಗೆ ನೆರವಾಗುತ್ತದೆ.
- ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ಮಲಬದ್ದತೆಯನ್ನು ನಿವಾರಿಸುತ್ತದೆ.
- ಗರ್ಭಿಣಿಯರಿಗೆ ಆರೋಗ್ಯದ ವಿಷಯದಲ್ಲಿ ಸಹಾಯ ಮಾಡುತ್ತದೆ.
Comments