ಬಾಡಿಗೆ ಮನೆ ಬಗ್ಗೆ ರಾಕಿಂಗ್ ಸ್ಟಾರ್ ಹೇಳಿದ್ದೇನು?
ರಾಕಿಂಗ್ ಸ್ಟಾರ್ ಯಶ್ ಅವರ ಬಾಡಿಗೆ ಮನೆ ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಯಶ್ ಅವರು ಫೇಸ್ ಬುಕ್ ಲೈವ್ ನಲ್ಲಿ ಎಲ್ಲ ವಿಷಯಗಳಿಗೂ ಸ್ಪಷ್ಟನೆ ಕೊಟ್ಟಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರು ಬಾಡಿಗೆ ಮನೆಯನ್ನು 3 ತಿಂಗಳೊಳಗೆ ಬಿಟ್ಟುಕೊಡುವಂತೆ ಕೋರ್ಟ್ ಆದೇಶ ನೀಡಿದ ಹಿನ್ನಲೆಯಲ್ಲಿ ನಟ ಯಶ್ ಗೆ 'ಆ' ಮನೆ ಸಿಕ್ಕಾಪಟ್ಟೆ ಲಕ್ಕಿ. ಆ ಮನೆಗೆ ಯಶ್ ಕಾಲಿಟ್ಟ ಮೇಲೆಯೇ ಸಿನಿಮಾಗಳು ಹಿಟ್ ಮೇಲೆ ಹಿಟ್ ಕೊಡಲು ಶುರು ಮಾಡಿದ್ದು. ಹೀಗಾಗಿ, ಆ ಮನೆಯನ್ನ ಓನರ್ ಗೆ ಬಿಟ್ಟುಕೊಡುತ್ತಿಲ್ಲ ಅಂತ ಕಾಮೆಂಟ್ ಅನ್ನು ಕೂಡ ಮಾಡಿದ್ದಾರೆ. ಆದರೆ ಇದೀಗ ಯಶ್ ಅವರು ಫೇಸ್ ಬುಕ್ ಲೈವ್ ಗೆ ಬಂದು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ''ಆ ಮನೆ ನನಗೆ ಲಕ್ಕಿ ಅಂತ ಕೆಲವು ಪ್ರೋಗ್ರಾಂಗಳಲ್ಲಿ ನಾನು ನೋಡಿದೆ. ಆದ್ರೆ, ಅಂತಹ ಮೂಢನಂಬಿಕೆಗಳು ನನಗೆ ಇಲ್ಲ. ನಾನು ಯಾವ್ಯಾವ ಮನೆಗಳಲ್ಲಿ ಇದ್ನೋ, ಆ ಎಲ್ಲ ಮನೆಗಳಲ್ಲೂ ಹಿಟ್ ಸಿನಿಮಾ ಕೊಟ್ಟಿದ್ದೇನೆ. ನಿಜ ಹೇಳ್ಬೇಕಂದ್ರೆ, ಆ ಮನೆ ಬಿಟ್ಟ ಮೇಲೆ 'ರಾಜಾಹುಲಿ', 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ ಬಂದಿದ್ದು. ಎರಡೂ ಹಿಟ್ ಸಿನಿಮಾಗಳೇ. ಒಂದು ಮನೆಯಿಂದ ಸಿನಿಮಾ ಹಿಟ್ ಆಗುತ್ತೆ ಅಂತ ನಂಬುವ ವೀಕ್ ವ್ಯಕ್ತಿ ನಾನಲ್ಲ. ನನ್ನ ಕೆಲಸ, ನನ್ನ ಪರಿಶ್ರಮದಿಂದ ನಾನು ಗೆಲ್ತೀನಿ ಹಾಗೂ ಗೆಲ್ಲುತ್ತಿದ್ದೇನೆ ಎಂಬ ನಂಬಿಕೆ ಯ ಜೊತೆಗೆ ವಿಶ್ವಾಸ ಇಟ್ಟುಕೊಂಡಿರುವ ವ್ಯಕ್ತಿ ನಾನು. ಮನೆ ಇಲ್ಲದೆ ಬದುಕಿ ಬಂದವನು ನಾನು. ಆ ಮನೆಯಿಂದ ನನಗೆ ಅದೃಷ್ಟ ಇಲ್ಲ. ನಾನು ಒಳ್ಳೆ ಸಿನಿಮಾ ಮಾಡಿದ್ರೆ ನೋಡ್ತೀರಾ, ಇಲ್ಲ ಅಂದ್ರೆ ಇಲ್ಲ. ಅದನ್ನ ಬಿಟ್ಟು ನಾನು ಯಾವ ಮನೆಯಲ್ಲಿ ಇದ್ದರೇನು' ಎಂದು ಯಶ್ ಅವರು ತಮ್ಮ ಫೇಸ್ ಬುಕ್ ಲೈವ್ ನಲ್ಲಿ ಹೇಳಿಕೊಂಡಿದ್ದಾರೆ.
Comments