ಆಕ್ಟೋಪಸ್ ಗೆ ಎಷ್ಟು ಹೃದಯಗಳಿವೆ ಅನ್ನೋದು ಗೊತ್ತಾ?
ಮಾನವನ ದೇಹದಲ್ಲಿ ಅತೀ ಮುಖ್ಯವಾದ ಅಂಗ ಎಂದರೆ ಅದು ಹೃದಯ. ಒಮ್ಮೆ ಹೃದಯ ಕೈ ಕೊಟ್ಟರೆ ಮನುಷ್ಯನ ಕಥೆ ಮುಗಿತು ಅಂತಾನೆ ಅರ್ಥ. ಆದರೆ ಪ್ರಾಣಿ ಪ್ರಪಂಚ ಒಂಥರಾ ಡಿಫರೆಂಟ್.
ಆಕ್ಟೋಪಸ್ ಬಗ್ಗೆ ಸಾಮಾನ್ಯವಾಗಿ ಕೆಲವೊಂದು ವಿಷಯಗಳು ಗೊತ್ತೆ ಇರುತ್ತವೆ. ಆದರೆ ಆಕ್ಟೋಪಸ್ ಎಷ್ಟು ಹೃದಯ ಇದೆ ಅನ್ನೋದು ಗೊತ್ತಾ? ಆಕ್ಟೋಪಸ್‍ಗಳಿಗೆ ಮೂರು ಹೃದಯಗಳಿವೆ.. ಎಷ್ಟು ಆಶ್ಚರ್ಯದ ಸಂಗತಿ ಅಲ್ವ... ಕೇವಲ ಮೂರು ಹಾರ್ಟ್ ಅಷ್ಟೆ ಅಲ್ಲ... ಒಂಭತ್ತು ಮಿದುಳು ಮತ್ತು ನೀಲಿ ರಕ್ತವಿದೆ... ಎರಡು ಹೃದಯಗಳು ಕಿವಿಗಳಿಗೆ ರಕ್ತವನ್ನು ಪಂಪ್ ಮಾಡುತ್ತವೆ..ಇನ್ನ ಉಳಿದ ಹೃದಯವು ದೇಹದ ಉಳಿದ ಭಾಗಗಳಿಗೆ ರಕ್ತವನ್ನು ಪರಿಚಲಿಸುತ್ತದೆ.. ನರಮಂಡಲದ ಒಂದು ಕೇಂದ್ರ ಮೆದುಳಿನ ಮತ್ತು ಚಲನೆಯನ್ನು ನಿಯಂತ್ರಿಸುವ ದೊಡ್ಡ ಗ್ಯಾಂಗ್ಲಿಯಾನ್ ಅನ್ನು ಒಳಗೊಂಡಿದೆ.
Comments