ಸ್ನ್ಯಾಪ್ ಡ್ರ್ಯಾಗನ್ ಸೀಡ್ ಪಾಡ್ ಎಂಬ ವಿಚಿತ್ರ ಗಿಡ

ಗಿಡಗಳಲ್ಲಿ ನಾನಾ ರೀತಿಯ ಗಿಡಗಳು ಇರುತ್ತವೆ. ಕೆಲವೊಂದನ್ನು ನಾವು ನೋಡಿಯೇ ಇರುವುದಿಲ್ಲ. ಅಂತಹ ಗಿಡಗಳು ಸಾಮಾನ್ಯವಾಗಿ ಕಾಡುಗಳಲ್ಲಿ ಹೆಚ್ಚಾಗಿ ಕಾಣಿಸುತ್ತವೆ. ಇಲ್ಲೊಂದು ಗಿಡವಿದೆ ನೋಡಿ.
ಸ್ನ್ಯಾಪ್ ಡ್ರ್ಯಾಗನ್ ಸೀಡ್ ಪಾಡ್ ಈ ಗಿಡದ ಹೆಸರೆ ಒಂಥರಾ ವಿಚಿತ್ರವಾಗಿದೆ. ಇದನ್ನ ನೋಡುತ್ತಿದ್ದರೆ ಮನುಷ್ಯನ ತಲೆಬುರುಡೆಯನ್ನೆ ನೋಡಿದ ಹಾಗೆ ಅನಿಸುತ್ತದೆ. ಒಬ್ಬ ಮನುಷ್ಯ ಸತ್ತಮೇಲೆ ಆತನ ದೇಹವನ್ನ ಮಣ್ಣಿಗೆ ಹಾಕಿದ ಮೇಲೆ ಹೇಗೆ ಮೂಳೆಗಳು ಮಾತ್ರ ಉಳಿದು ತಲೆ ಬುರುಡೆ ಉಳಿಯುತ್ತದೆಯೋ ಆ ರೀತಿಯಲ್ಲಿ ಈ ಗಿಡ ಇರುತ್ತದೆ.ನೋಡಲು ಎರಡು ಕಣ್ಣುಗಳು ಇರೋ ರೀತಿನೆ ಇವೆ. ಜೊತೆಗೆ ಮೂಗು ಬಾಯಿ ಎಲ್ಲವೂ ಕೂಡ ಇದೆ. ಒಟ್ಟಾರೆ ಒಬ್ಬ ಮನುಷ್ಯನ ತಲೆಬುರುಡೆಯ ರೀತಿಯೇ ಇದೆ. ಇದರಿಂದ ನೋಡುಗರಿಗೆ ಸ್ವಲ್ಪ ಭಯ ಹುಟ್ಟಿಸುವ ರೀತಿಯಲ್ಲಿವೆ.
Comments