ರೇಪಿಸ್ಟ್ ಹೇಳಿಕೆ ಕೊಟ್ಟಿರೋ ರಶ್ಮಿ ಆರ್ ನಾಯರ್ ಯಾರು ?

ರಶ್ಮಿ ಆರ್ ನಾಯರ್ ಮೂಲತಃ ಕೇರಳದವರು. ಇವರು ಕೇರಳದ ಸಾಂಪ್ರದಾಯಿಕ ಕುಟುಂಬದಿಂದ ಬಂದ ಹೆಣ್ಣು ಮಗಳು.ಈಕೆ ಅಂತರಾಷ್ಟ್ರೀಯ ಮಟ್ಟದ ದೊಡ್ಡ ಬಿಕಿನಿ ಮಾಡೆಲ್ ಆಗಿದ್ದಳು. ಸಂಪ್ರದಾಯ ಮನೆತನದಿಂದ ಬಂದ ಈಕೆಈ ರೀತಿಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಾಳೆ ಎಂದು ಯಾರೊಬ್ಬರು ಕೂಡ ಊಹಿಸಿರಲಿಲ್ಲ.
ಈಕೆ ತನ್ನ 25 ನೆ ವಯಸ್ಸಿನಲ್ಲಿ ಮದುವೆಯಾದರು. ರಶ್ಮಿಯ ಪತಿ ಒಬ್ಬ ಕಿರು ಚಲನಚಿತ್ರ ನಿರ್ದೇಶಕನಾಗಿದ್ದರು. ಆಕೆಗೆ 3 ವರ್ಷದ ಮಗು ಕೂಡ ಇದೆ. ತದ ನಂತರ ಆಕೆಯ ಪತಿ ರಾಹುಲ್ ಪಸುಪಾಲನ್ ನ ಇಷ್ಟದಂತೆ ತನ್ನ ವೃತ್ತಿ ಜೀವನಕ್ಕೂ ಕೂಡ ಕಾಲಿಟ್ಟರು. 2014 ರಲ್ಲಿ ಕೇರಳದ ಎರ್ನಾಕುಲಂನಲ್ಲಿ ನಡೆದ ಕಿಸ್ ಆಪ್ ಲವ್ ಅಭಿಯಾನದಲ್ಲಿ ತನ್ನ ಪತಿಯ ಜೊತೆ ಸೇರಿಕೊಂಡು ಪ್ರಚಾರವನ್ನು ಗಿಟ್ಟಿಸಿಕೊಂಡಳು. ಮೊಟ್ಟ ಮೊದಲ ಬಾರಿಗೆ ಕಿಸ್ ಆಫ್ ಲವ್ ಅಭಿಯಾನವು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಹೆಸರನ್ನು ಕೂಡ ಮಾಡಿತ್ತು. ಇದೇ ಸಂದರ್ಭದಲ್ಲಿ ರಶ್ಮಿ ಮತ್ತು ಆಕೆಯ ಪತಿ ರಾಹುಲ್ ಪಸುಪಾಲನ್ ಅವರನ್ನು ಆನ್ ಲೈನ್ ನಲ್ಲಿ ಲೈಂಗಿಕ ದೌಜನ್ಯವನ್ನು ನಡೆಸುತ್ತಿದ್ದ ಇವರನ್ನು ನವೆಂಬರ್ 2,2014 ರಲ್ಲಿ ಬಂಧಿಸಲಾಯಿತು.
ಈ ಮೊದಲೆ ತಿಳಿಸಿದಂತೆ ರಶ್ಮಿ ಕೇರಳದ ಎರ್ನಾಕುಲಂಗೆ ಸೇರಿದವರು. ಅಷ್ಟೆ ಅಲ್ಲದೆ ಮಾಡಲಿಂಗ್ ಕ್ಷೇತ್ರದಲ್ಲಿ ಹೆಸರನ್ನು ಮಾಡಿದ್ದಳು. ಪತಿ ರಾಹುಲ್ ನ ಸ್ನೇಹಿತನೊಬ್ಬ ತನ್ನ ತಮಿಳು ಚಲನಚಿತ್ರದಲ್ಲಿ ಅಭಿನಯಿಸಲು ಹೇಳಿದ್ದನು. ಅದರ ಮೂಲಕ ಆಕೆ ಚಿತ್ರರಂಗವನ್ನು ಪ್ರವೇಶ ಮಾಡಿದ್ದಳು. ಆಕೆ ಮಾಡಿಸಿದ್ದ ಬಿಕಿನಿಯ ಪೋಟೋ ಶೂಟ್ ಹೇಗಿತ್ತು ಅಂದರೆ ನಿಜಕ್ಕೂ ಅಲ್ಲಿಯ ಜನವೆ ನಂಬಲಾರದಂತೆ ಇತ್ತು.ಅಷ್ಟರ ಮಟ್ಟಿಗೆ ಆಕೆ ಪೋಟೋ ಶೂಟ್ ಮಾಡಿಸಿದ್ದಳು. ಆಕೆಯ ಪೋಟೋಗಳು ವಿವಿಧ ವೆಬ್ ಸೈಟ್ ಗಳಲ್ಲಿ ಬಿಸಿಬಿಸಿ ಸುದ್ದಿಕೂಡ ಆಗಿದ್ದವು. ಕಿಸ್ ಆಫ್ ಲವ್ ಅಭಿಯಾನದ ಮೂಲಕ ರಾತ್ರೋರಾತ್ರಿ ರಶ್ಮಿ ಮತ್ತು ಆಕೆಯ ಪತಿ ರಾಹುಲ್ ಪಶುಪಾಲನ್ ಸುದ್ದಿಯಾಗಿದ್ದರು. ಈ ಅಭಿಯಾನವು ಅನೇಕ ಹಿಂದೂ ಸಂಘಟನೆಗಳು ಕೆಂಡಾಮಂಡಲವಾಗುವಂತೆ ಮಾಡಿದವು.
Comments