ರುದ್ರ ಹನುಮಾನ್ ಭಾವಚಿತ್ರ ಹಾಕಿಕೊಂಡ ಉಬರ್ ಕ್ಯಾಬ್‍ನವರು ರೇಪಿಸ್ಟ್ ಗಳು- ರಶ್ಮಿ ನಾಯರ್
ನಗರದಲ್ಲಿ ಅತ್ಯಚಾರ ಪ್ರಕರಣ ಹೆಚ್ಚಾಗುತ್ತಿರುವುದು ಎಲ್ಲರಿಗೂ ಕೂಡ ಗೊತ್ತಿರುವ ಗಂಭೀರದ ವಿಷಯವಾಗಿದೆ. ನಗರದಲ್ಲಿರುವ ಆಂಜನೇಯನ ಭಾವಚಿತ್ರವುಳ್ಳ ಯಾವುದೇ ಉಬರ್ ಕ್ಯಾಬ್ ಗಳನ್ನು ಹತ್ತಬೇಡಿ. ಇದೆಲ್ಲ ಹಿಂದುತ್ವದ ಸಂಕೇತವಾಗಿದ್ದು, ಇಂತಹ ಭಾವಚಿತ್ರ ಹಾಕಿಕೊಂಡವರು ರೇಪಿಸ್ಟ್ ಗಳು ಅಂತಾ ವಿವಾದತ್ಮಾಕ ಪೋಸ್ಟ್ ಹಾಕಿಕೊಂಡು ರಶ್ಮಿ ನಾಯರ್ ಇದೀಗ ಬಾರಿ ಸುದ್ದಿಯಲ್ಲಿದ್ದಾರೆ.
ರಶ್ಮಿ ನಾಯರ್ ಹಾಕಿರುವ ಪೋಸ್ಟ್ ನಲ್ಲಿ ಏನಿದೆ ಎಂಬುದನ್ನು ನೋಡುವುದಾದರೆ ರಶ್ಮಿ ನಾಯರ್ ಆದ ನಾನು ಬೆಂಗಳೂರಿನ ಉಬರ್ ಕ್ಯಾಬ್ ಬಳಸುತ್ತಿರುವ ಗ್ರಾಹಕಿಯಾಗಿದ್ದು, ಸುಮಾರು ಬಾರಿ ನಾನೊಬ್ಬಳೆ ಉಬರ್ ಪ್ರಯಾಣವನ್ನು ಮಾಡುತ್ತಿರುತ್ತೇನೆ. ನಾನೊಬ್ಬಳು ಮಾತ್ರವಲ್ಲದೆ ನನ್ನ ಜೊತೆ ಕೆಲಸ ಮಾಡಿಕೊಂಡಿರುವ ಹಲವು ಮಹಿಳಾ ಸಹದ್ಯೋಗಿಗಳು ಸಹ ಉಬರ್ ಕ್ಯಾಬ್ ನಲ್ಲಿ ಓಡಾಡುತ್ತಾರೆ. ಕೆಲವೊಂದು ಉಬರ್ ಕ್ಯಾಬ್ ಗಳ ಮೇಲೆ ಹಿಂದುತ್ವದ ಸಂಕೇತವುಳ್ಳ ರುದ್ರ ಹನುಮಾನ್ ಮುಂತಾದ ರೀತಿಯ ಭಾವಚಿತ್ರಗಳನ್ನು ಹಾಕಲಾಗಿದೆ. ಸಾಕಷ್ಟು ಹಿಂದುತ್ವ ಸಂಘಟನೆಗಳು ಮತ್ತು ಮುಖಂಡರು ಕಥುವಾದಲ್ಲಿ ನಡೆದ ರೇಪ್ ಪ್ರಕರಣದ ಆರೋಪಿಗಳ ಪರವಾಗಿಯೇ ವಾದವನ್ನು ಮಾಡುತ್ತಾರೆ. ನಾನು ಮತ್ತು ನನ್ನ ಸಹದ್ಯೋಗಿಗಳಿಗೆ ಹಿಂದುತ್ವದ ಸಂಕೇತವುಳ್ಳ ಉಬರ್ ಕ್ಯಾಬ್ ಗಳಲ್ಲಿ ಪ್ರಯಾಣಿಸಲು ಭಯವಾಗುತ್ತಿದೆ. ಹಾಗಾಗಿ ಹಿಂದುತ್ವದ ಸಂಕೇತ, ಭಾವಚಿತ್ರ ಮತ್ತು ಚಿಹ್ನೆವುಳ್ಳ ಕ್ಯಾಬ್‍ಗಳಲ್ಲಿ ಇನ್ನು ಮುಂದೆ ನಾನು ಸಂಚರಿಸುವುದಿಲ್ಲ. ಈ ರೀತಿಯ ಕ್ಯಾಬ್‍ಗಳು ಬಂದರೆ ನನ್ನ ಬುಕ್ಕಿಂಗ್ ಕೂಡ ಕ್ಯಾನ್ಸಲ್ ಮಾಡಿಕೊಳ್ಳುತ್ತೇನೆ. ರೇಪಿಸ್ಟ್ ಗಳಿಗೆ ಮತ್ತು ಅದನ್ನು ಬೆಂಬಲಿಸುವರಿಗೆ ನನ್ನ ಹಣವನ್ನು ಕೂಡ ನೀಡಲು ಇಷ್ಟಪಡುವುದಿಲ್ಲ ಅಂತಾ ಬರೆದುಕೊಂಡು ರುದ್ರ ಹನುಮಾನ್ ಭಾವಚಿತ್ರವುಳ್ಳ ಕ್ಯಾಬ್ ಫೋಟೋವೊಂದನ್ನು ಪೋಸ್ಟ್ ನಲ್ಲಿ ರಶ್ಮಿ ನಾಯರ್ ಹಾಕಿಕೊಂಡಿದ್ದಾರೆ. ಈ ವಿಷಯವಾಗಿ ತಮ್ಮ ಫೇಸ್ ಬುಕ್ ನಲ್ಲಿ ಈ ರೀತಿಯ ಪೋಸ್ಟ್ ಹಾಕಿಕೊಂಡಿದ್ದಕ್ಕೆ, ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ಈಗಾಗಲೇ ಪ್ರಾರಂಭವಾಗಿವೆ.
ಈ ಸಂಬಂಧವಾಗಿ ಸಾಕಷ್ಟು ಹಿಂದುತ್ವವಾದಿಗಳು ರಶ್ಮಿ ನಾಯರ್ ವಿರುದ್ದ ಕೆಂಡಾಮಂಡಲವಾಗಿದ್ದಾರೆ. ಅತ್ಯಚಾರಿಗಳ ವಿರುದ್ದ ನಾವು ಕೂಡ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ಹಾಕಿದ್ದ ಛತ್ರಪತಿ ಶಿವಾಜಿ ಭಾವಚಿತ್ರ ಇರುವ ಪೋಟೋ ಪೋಸ್ಟ್ ಗೆ ರಶ್ಮಿ ನಾಯರ್ ಪಬ್ಲಿಕ್ ಟಾಯ್ಲೆಟ್ ಸಿಂಬಲ್ ಅಂತ ರಿಪ್ಲೆ ಕೂಡ ಮಾಡಿದ್ದಾರೆ. ಇದರಿಂದ ಮತ್ತಷ್ಟು ಜನ ಆಕೆಯ ವಿರುದ್ದ ಕಿಡಿಕಾರಿದ್ದಾರೆ.
ಕೇರಳದಲ್ಲಿ ನಡೆದ ರಶ್ಮಿ ನಾಯರ್ ನ ಕಿಸ್ ಆಫ್ ಲವ್ ಆಕ್ಟಿವಿಟಿಯು 2014 ರಲ್ಲಿ ನಡೆದಿತ್ತು. ಈ ವಿಷಯವಾಗಿ ಆಕೆ ಬಾರಿ ಸುದ್ದಿಯಲ್ಲಿದ್ದರು. ಒಮ್ಮೆ ಕಿಸ್ ಆಫ್ ಲವ್ ಅಭಿಯಾನದಲ್ಲಿ ಈಕೆ ತನ್ನನ್ನು ತಾನು ಹೆಚ್ಚಾಗಿ ಗುರುತಿಸಿಕೊಂಡರು. ಆಕೆಯ ಬಗ್ಗೆ ಪರಿಚಯವಿಲ್ಲದವರು ಕೂಡ ಆಕೆಯನ್ನು ಗುರುತಿಸುವಂತೆ ಆಯಿತು. ಕಿರು ಚಲನಚಿತ್ರ ನಿರ್ಮಾಪಕರಾದ ರಾಹುಲ್ ಪಸುಪಾಲನ್ ನೇತೃತ್ವದಲ್ಲಿ ಆ ಕಿಸ್ ಆಫ್ ಲವ್ ಅಭಿಯಾನವನ್ನು ರಶ್ಮಿ ನಾಯರ್ ಪ್ರಾರಂಭಿಸಿದರು. ಈ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಚಳುವಳಿಯೆ ಆಗಿತ್ತು.
Comments