ಮದುವೆ ಆಮಂತ್ರಣ ಪತ್ರಿಕೆಯ ನ್ಯೂ ಸ್ಟೈಲ್
ಮದುವೆಯ ಆಮಂತ್ರಣವನ್ನು ಸಾಮಾನ್ಯವಾಗಿ ಎಲ್ಲರೂ ಕೂಡ ನೋಡಿಯೇ ಇರುತ್ತಾರೆ. ತಮಗೆ ಇಷ್ಟ ಬಂದ ಡಿಸೈನ್ ನಲ್ಲಿ ಕಾರ್ಡ್ ಅನ್ನು ಮಾಡಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬರು ಮತದಾನದ ಜಾಗೃತಿ ತಿಳಿಸಲು ಹೊಸ ಪ್ರಯತ್ನವನ್ನು ಮಾಡಿದ್ದಾರೆ.
ಇದೀಗ ಸಪ್ತಪದಿ ತುಳಿಯಲಿರುವ ಜೋಡಿಯೊಂದು ನೂರರಷ್ಟು ಮತದಾನವಾಗಲೆಂದು ಜಿಲ್ಲಾಡಳಿತದ ಆಶಯದಂತೆ ಮದುವೆ ಸಮಾರಂಭವನ್ನು ಮತದಾನ ಜಾಗೃತಿಗೆ ಮೀಸಲಿಟ್ಟು ವಿಶಿಷ್ಟ ಕಾರ್ಯಕ್ಕೆ ಮುಂದಾಗಿದ್ದಾರೆ. ಹಾನಗಲ್ ತಾಲೂಕಿನ ಸಿದ್ದಪ್ಪ (ವರ) ಹಾಗೂ ಜ್ಜ್ಯೋತಿ (ವಧು) ಎಂಬುವರು ಹಾವೇರಿ ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್ ರಿಂದ ಅನುಮತಿ ಪಡೆದು ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಮತದಾರರ ಗುರುತಿನ ಚೀಟಿ ರೀತಿ ವಿನ್ಯಾಸವನ್ನು ಮಾಡಿಸಿದ್ದಾರೆ. ಈ ವಿಶಿಷ್ಟ ಆಮಂತ್ರಣ ಪತ್ರಿಕೆ ಮದುವೆ ದಿನಾಂಕವನ್ನೇ ವೋಟರ್ ಐಟಿ ಸಂಖ್ಯೆಯಾಗಿ ಬದಲಿಸಲಾಗಿದ್ದು, ಆಮಂತ್ರಣದಲ್ಲಿ ಮದುವೆ ನಡೆಯುವ ದಿನಾಂಕ/ಸ್ಥಳ ವಧುವರರ ಹೆಸರು, ಜನ್ಮ ದಿನಾಂಕ ಜೊತೆಗೆ ಮತದಾನದ ಜಾಗೃತಿ ಸಂದೇಶಗಳೂ ಕೂಡ ಇವೆ.
Comments