ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಏಕೆ ಖರೀದಿಸುತ್ತಾರೆ?
ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದು ಎಲ್ಲರಿಗೂ ಕೂಡ ಗೊತ್ತಿರುವ ವಿಷಯವೇ. ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸಿ ಅದನ್ನು ಧರಿಸಿದ್ರೆ, ಅಕ್ಷಯವಾಗುತ್ತದೆ ಎಂಬ ನಂಬಿಕೆಯು ಕೂಡ ಇದೆ.
ಹೀಗಾಗಿ ಪ್ರತೀ ವರ್ಷದಂತೆ ಈ ವರ್ಷವೂ ಚಿನ್ನ ಖರೀದಿಗೆ ಜನರು ಮುಗಿ ಬೀಳುವುದು ಖಂಡಿತ. ತೇತ್ರಾಯುಗ ಆರಂಭವಾದಾಗ, ವಿಷ್ಣು ಮತ್ತು ಲಕ್ಷ್ಮಿದೇವಿ ಗಂಗೆಗೆ ಪೂಜೆ ಸಲ್ಲಿಸಿದ್ದು, ಪರಶುರಾಮ ಮತ್ತು ಬಸವಣ್ಣ ಜನಿಸಿದ್ದು, ಮಹಾಭಾರತದಲ್ಲಿ ದ್ರೌಪದಿ ಅಕ್ಷಯ ಪಾತ್ರೆ ಪಡೆದಿದ್ದು, ದೇವಾನುದೇವತೆಗಳೇ ಈ ದಿನದಂದು ವ್ರತ, ಪೂಜೆ, ಪುನಸ್ಕಾರ, ದಾನ, ಧರ್ಮ ಹೋಮ-ಹವನಗಳನ್ನು ಮಾಡುತ್ತಾ ಬಂದಿದ್ದಾರೆ. ಈ ದಿನದಂದು ಚಿನ್ನದ ಆಭರಣಗಳನ್ನು ಕೊಂಡರೆ ಅದೆಲ್ಲಾ ಅಕ್ಷಯವಾಗುತ್ತೆ ಎಂಬ ಪ್ರತೀತಿ ಕೂಡ ಇದೆ ಹೀಗಾಗಿ ಅಕ್ಷಯ ತೃತಿಯವನ್ನು ಆಚರಣೆ ಮಾಡುತ್ತಾರೆ. ಚಿನ್ನದ ಬೆಲೆ ಗಗನಕುಸುಮವಾಗಿದ್ದರೂ ಕೂಡ ಚಿನ್ನ ಖರೀದಿಸುವವರ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ನೀವು ಕೂಡ ನಾಳೆ ಚಿನ್ನವನ್ನು ಖರೀದಿ ಮಾಡಿ ಅಕ್ಷಯರಾಗಿರಿ.
Comments