ಅಕ್ಷಯ ತೃತೀಯ ಹಿನ್ನಲೆಯ ಬಗ್ಗೆ ನಿಮಗೆಷ್ಟು ಗೊತ್ತು?

17 Apr 2018 4:56 PM | General
421 Report

ಅಕ್ಷಯ ತೃತೀಯ ಈ ಹಬ್ಬವನ್ನು ಕೆಲವರು ಬಸವನ ಹಬ್ಬ ಎಂತಲೂ ಕರೆಯುತ್ತಾರೆ. ಅಕ್ಷಯವೆಂದರೆ ಸಮೃದ್ಧಿ ಎಂದರ್ಥ. ಶುಭಾರಂಭದ ಆಶಯ ಎಂದರ್ಥ. ಹಾಗಾಗಿ ಈ ಹಬ್ಬದ ದಿನ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ. ವ್ಯಾಪಾರ, ವ್ಯವಹಾರ ,ವಿವಾಹ ಈ ರೀತಿಯ ಕೆಲಸಗಳನ್ನು ಶುರು ಮಾಡುತ್ತಾರೆ.

ದೇವತೆಗಳಲ್ಲೆಲ್ಲಾ ಕುಬೇರ ಮಹಾಲಕ್ಷ್ಮಿಯನ್ನು ಆರಾಧಿಸಿದ್ದೂ ಕೂಡ ಈ ಶುಭದಿನದಂದೇ.  ಕುಬೇರ ಹಾಗೂ ಲಕ್ಷ್ಮಿ ಇವರುಗಳ ಪೂಜೆಯನ್ನು ಮಾಡಲಾಗುತ್ತದೆ. 12ನೇ ಶತಮಾನದ ಮಹಾಪುರುಷ ಬಸವೇಶ್ವರರು ಹುಟ್ಟಿದ್ದೂ ಕೂಡ ಇದೇ ದಿನದಂದು ಈ ಅಕ್ಷಯ ತೃತೀಯ ದಿನದಂದು ಮಹಾವಿಷ್ಣುವಿನ ಪೂಜೆ ಮಾಡಿದರೆ ಮೋಕ್ಷ ದೊರೆಯುತ್ತದೆ ಎಂಬ ಪ್ರತೀತಿ ಕೂಡ ಇದೆ.ಅಕ್ಷಯ ತೃತೀಯ ದಿವಸವೇ ಕೃತಯುಗದ ಪ್ರಾರಂಭವೂ ಕೂಡ ಆಗಿತ್ತು.ಅಷ್ಟೆ ಅಲ್ಲದೆ ಅಕ್ಷಯ ತೃತೀಯ ದಿನದಂದೇ ಮಹರ್ಷಿ ವೇದವ್ಯಾಸರು ಮಹಾಗಣಪತಿ ಹಸ್ತದಿಂದ ಮಹಾಭಾರತದ ಬರವಣಿಗೆಯನ್ನು ಪ್ರಾರಂಭ ಕೂಡ ಮಾಡಿದರು.  ಚಾಮುಂಡೇಶ್ವರಿ ರಾಕ್ಷಸರನ್ನು ಸಂಹರಿಸಿದ್ದು, ಕೃಷ್ಣನ ಅಣ್ಣ ಬಲರಾಮನು ಜನಿಸಿದ್ದು, ಶ್ರೀಕೃಷ್ಣನು ಕುಚೇಲನನ್ನು ಸತ್ಕರಿಸಿದ್ದು, ಪಾಂಡವರು ವನವಾಸದಲ್ಲಿದ್ದಾಗ ಶ್ರೀಕೃಷ್ಣನ ಆದೇಶದಂತೆ ಸೂರ್ಯನನ್ನು ಪ್ರಾರ್ಥಿಸಿ ಅಕ್ಷಯ ಪಾತ್ರೆಯನ್ನು ಪಡೆದಿದ್ದು, ತಮ್ಮ ವನವಾಸ-ಅಜ್ಞಾತವಾಸದ ನಂತರ ಶಸ್ತ್ರಾಸ್ತ್ರಗಳನ್ನು ಪುನಃ ಪಡೆದಿದ್ದು ಅಕ್ಷಯ ತೃತೀಯ ದಿವಸವೇ ಆಗಿದೆ ಎಂದು ಹೇಳಲಾಗುತ್ತದೆ.ಎಲ್ಲರಿಗೂ ಕೂಡ ಅಕ್ಷಯತೃತೀಯ ದಿನ ಒಳ್ಳೆಯದಾಗಲಿ ಎಂದು ಆಶಿಸೋಣ.

Edited By

Manjula M

Reported By

Manjula M

Comments